Davis Cup 2022 – ಡೆನ್ಮಾರ್ಕ್ ವಿರುದ್ಧದ ಭಾರತ ತಂಡದಲ್ಲಿ ಸುಮಿತ್ ನಗಾಲ್ ಗೆ ಸ್ಥಾನವಿಲ್ಲ.

ಮಾರ್ಚ್ ನಲ್ಲಿ ಡೆನ್ಮಾರ್ಕ್ ವಿರುದ್ದ ನಡೆಯಲಿರುವ ಡೆವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಆಡುವ ಭಾರತ ತಂಡವನ್ನು ಭಾರತೀಯ ಟೆನಿಸ್ ಸಂಸ್ಥೆ ಪ್ರಕಟಿಸಿದೆ.
ಐದು ಸದಸ್ಯರನ್ನೊಳಗೊಂಡ ತಂಡದಲ್ಲಿ ಸುಮಿತ್ ನಗಾಲ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇನ್ನುಳಿದಂತೆ ಯುಕಿ ಭಾಂಬ್ರಿ, ರಾಮ್ ಕುಮಾರ್ ರಾಮನಾಥನ್ ಮತ್ತು ಪ್ರಜ್ನೇಶ್ ಗುಣೇಶ್ವರನ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಹಾಗೇ ಡಬಲ್ಸ್ ನಲ್ಲಿ ರೋಹನ್ ಬೋಪಣ್ಣ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ರೋಹನ್ ಬೋಪಣ್ಣ ಅವರಿಗೆ ದಿವಿಜಿ ಶರಣ್ ಸಾಥ್ ನೀಡಲಿದ್ದಾರೆ. ಸಕೇತ್ ಮೈನೆನಿ ಮತ್ತು ದಿಗ್ವಿಜಯ್ ಪ್ರತಾಪ್ ಸಿಂಗ್ ಅವರು ರಿಸರ್ವ್ ಆಟಗಾರರಾಗಿದ್ದಾರೆ.
ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಸುಮಿತ್ ನಗಾಲ್ ಅವರಿಗೆ 222ನೇ ಶ್ರೇಯಾಂಕ. ಆದ್ರೆ ಯುಕಿ ಭಾಂಬ್ರಿ ಅವರಿಗೆ 863ನೇ ಶ್ರೇಯಾಂಕ. ಹಾಗೇ ಪ್ರಜ್ನೇಶ್ ಗುಣೇಶ್ವರನ್ ಅವರಿಗೆ 228 ಶ್ರೇಯಾಂಕ. ಹೀಗಾಗಿ ಸಹಜವಾಗಿಯೇ ಸುಮಿತ್ ನಗಾಲ್ ಅವರನ್ನು ಆಯ್ಕೆ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನೊಂದೆಡೆ ರಾಮ್ ಕುಮಾರ್ ರಾಮನಾಥನ್ ಅವರು 182ನೇ ಶ್ರೇಯಾಂಕವನ್ನು ಪಡೆದಿದ್ದಾರೆ.
ಕೋವಿಡ್ ಮಾರ್ಗಸೂಚಿಯಂತೆ ಈ ಟೂರ್ನಿ ನಡೆಯಲಿದ್ದಾರೆ. ಟೂರ್ನಿಯು ಬಯೋ ಬಬಲ್ ನಲ್ಲಿ ನಡೆಯಲಿದೆ. ಮಾರ್ಚ್ 4 ಮತ್ತು 5ರಂದು ಈ ಟೂರ್ನಿಯು ದೆಹಲಿಯ ಜಿಮ್ಖಾನಾ ಕ್ಲಬ್ ನಲ್ಲಿ ನಡೆಯಲಿದೆ.