ಭರ್ಜರಿ ಪ್ರದರ್ಶನ ನೀಡಿದ Bajrang Punia ಚಿನ್ನದ ಸಾಧನೆ
ಬಂಗಾರದ ಪದಕದ ಆಸೆ ಚಿಗುರಿಸಿದ್ದ ಭಾರತದ ಸ್ಟಾರ್ ಕುಸ್ತಿ ಪಟು Bajrang Punia ಬಂಗಾರದ ನಗೆ ಬೀರಿದ್ದಾರೆ. ಶುಕ್ರವಾರ ನಡೆದ ಪುರುಷರ 65 ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಸೊಗಸಾದ ಪ್ರದರ್ಶನ ನೀಡಿದ ಭಜರಂಗ್ ಚಿನ್ನ ತಮ್ಮದಾಗಿಸಿಕೊಂಡರು.
ಫೈನಲ್ ಪಂದ್ಯದ ಮೊದಲಾವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ Bajrang Punia ಅಬ್ಬರಿಸಿದರು. ಭಜರಂಗ್ ಪುನಿಯಾ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದರು. ಆರಂಭದಲ್ಲಿ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಭಜರಂಗ್ ಈ ಅವಧಿಯಲ್ಲಿ 4-0 ಯಿಂದ ಮುನ್ನಡೆ ಸಾಧಿಸಿದರು.
ಅಲ್ಲದೆ ಎರಡನೇ ಅವಧಿಯಲ್ಲಿ ಕೆನಡಾದ ಆಟಗಾರ ಆಕ್ರಮಣಾಕರಿ ಆಟವನ್ನು ಆಡಿ ಎರಡು ಅಂಕಗಳನ್ನು ಪಡೆದರು. ಈ ಅವಧಿಯಲ್ಲಿ ಭಜರಂಗ್ ತಮ್ಮ ಅನುಭವದ ಲಾಭ ಪಡೆದು ಆಡಿದರು. ರಕ್ಷಣಾತ್ಮಕ ಆಟವನ್ನು ಆಡಿದ ಭಜರಂಗ್ ಅಬ್ಬರಿಸಿದರು. ಈ ಅವಧಿಯಲ್ಲಿ ಕೆನಡಾಡದ ಆಟಗಾರ ಭಜರಂಗ್ ಕಾಲು ಹಿಡಿಯಲು ವಿಫಲ ಯತ್ನ ಪಟ್ಟರು. ಆದರೆ ಈ ಅವಧಿಯಲ್ಲೂ ಭಜರಂಗ್ ತಮ್ಮ ಸೊಗಸಾದ ಆಟವನ್ನು ಮುಂದುವರೆಸಿದರು.
ಗೋಲ್ಡ್ ಕಾಸ್ಟ್ ನಲ್ಲಿ ಬಂಗಾರದ ಸಾಧನೆ ಮಾಡಿದ ಭಜರಂಗ್ ಮತ್ತೊಮ್ಮೆ ಬಂಗಾರದ ಸಾಧನೆ ಮಾಡಿದರು.
ಇವರು 10-0 ಯಿಂದ ಇಂಗ್ಲೆಂಡ್ ನ ಜಾರ್ಜ್ ರಾಮ್ ಅವರನ್ನು ಮಣಿಸಿದರು. ಈ ಪಂದ್ಯ 1.31 ನಿಮಿಷಗಳ ಕಾಲ ನಡೆಯಿತು. ಏಕ ಪಕ್ಷೀಯ ಪಂದ್ಯ ಗೆದ್ದ ಭಜರಂಗ್ ಫೈನಲ್ ಪ್ರವೇಶಿಸಿದರು.
Cwg 2022, wrestling, Bajrang Punia, won, gold