CWG 2022: ಭಾರತಕ್ಕೆ 11-0 ರಿಂದ ಘಾನಾ ವಿರುದ್ಧ ಜಯ
ಕಾಮನ್ ವೆಲ್ತ್ ಗೇಮ್ಸ್ ನ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿರುವ ಭಾರತ ಪುರುಷರ ಹಾಕಿ ತಂಡ ಘಾನಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ.
ಪಂದ್ಯದ ಆರಂಭದಿAದಲೂ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ ಭಾರತದ ಪುರುಷರ ಹಾಕಿ ತಂಡ, ಘಾನಾ ತಂಡದ ವಿರುದ್ಧ 11-0 ರ ಭರ್ಜರಿ ಗೆಲುವು ದಾಖಲಿಸಿತು.
ಪಂದ್ಯದ ಪ್ರಥಮ ಕ್ವಾರ್ಟರ್ನಲ್ಲಿ ಭಾರತೀಯ ಆಟಗಾರರು ಮೂರು ಗೋಲು ಬಾರಿಸಿ ಭಾರೀ ಮುನ್ನಡೆ ಸಾಧಿಸಿದ್ದರು. ಭಾರತದ ಪರ ಮನ್ಪ್ರೀತ್ ಸಿಂಗ್, ಹರ್ಮನ್ಪ್ರೀತ್ ಸಿಂಗ್ ಹಾಗೂ ಶಮ್ಶೇರ್ ಸಿಂಗ್ ಈ ಅವಧಿಯಲ್ಲಿ ತಲಾ ಒಂದೊಂದು ಗೋಲು ಬಾರಿಸಿದರು.
ಎರಡನೇ ಕ್ವಾರ್ಟರ್ನ ಆರಂಭದಲ್ಲಿಯೇ ಅಕ್ಷದೀಪ್ ಸಿಂಗ್ ಗೋಲು ಗಳಿಸಿ ತಂಡದ ಮುನ್ನಡೆಯನ್ನು 4-0 ಕ್ಕೆ ಹೆಚ್ಚಿಸಿದರು. ಮುಂದೆ ಜುಗರ್ಸಿಂಗ್ ಮತ್ತೊಂದು ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 5-0 ಕ್ಕೆ ಹೆಚ್ಚಿಸಿದರು. ಎರಡನೇ ಕ್ವಾರ್ಟರ್ನ ಅಂತ್ಯದಲ್ಲಿ ಭಾರತ 5-0 ರಿಂದ ಮುಂದೆ ಇತ್ತು.
ಮೂರನೇ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್, ನಿಲಕಂಠ ಹಾಗೂ ವರುಣ್ ತಲಾ ಒಂದು ಗೋಲು ಬಾರಿಸಿ ತಂಡದ ಮುನ್ನಡೆಯನ್ನು 8-0 ಕ್ಕೆ ಹೆಚ್ಚಿಸಿದರು. ಮುಂದೆ ಜುಗರಾಜ್ ಸಿಂಗ್ ಹಾಗೂ ಮನ್ದೀಪ್ ಸಿಂಗ್ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 10-0 ಕ್ಕೆ ಹೆಚ್ಚಿಸಿದರು. ಅಂತಿಮವಾಗಿ ಭಾರತ 11-0 ರಿಂದ ಗೆಲುವಿನ ನಗೆ ಬೀರಿತು.
cwg 2022, India, Ghana, Hockey