ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್-2023 ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ವಿಶ್ವ ಚಾಂಪಿಯನ್ ಪ್ರಶಸ್ತಿಗಾಗಿ ಹಣಾಹಣಿ ನಡೆಸಲು ಹತ್ತು ತಂಡಗಳ ಆಟಗಾರರು ಸಜ್ಜಾಗಿದ್ದಾರೆ. ಏಕದಿನ ಕ್ರಿಕೆಟ್ನ ಮಹತ್ವದ ಪಂದ್ಯಾವಳಿಯಲ್ಲಿ ಆಡುವ ನಿರೀಕ್ಷೆ ಹೊಂದಿದ್ದ ಹಲವು ಆಟಗಾರರು ಈ ಅವಕಾಶ ತಪ್ಪಿಸಿಕೊಂಡು ಭಾರೀ ನಿರಾಸೆ ಕಂಡಿದ್ದಾರೆ. ಈ ಎಲ್ಲಾ ಸ್ಟಾರ್ ಆಟಗಾರರು ಗಾಯಸ ಸಮಸ್ಯೆ ಕಾರಣದಿಂದಾಗಿ ವಿಶ್ವಕಪ್ನಿಂದ ಹೊರಗುಳಿದಿರುವುದು ಬೇಸರದ ಸಂಗತಿಯಾಗಿದ್ದು, ಇವರ ಅನುಪಸ್ಥಿತಿ ತಮ್ಮ ತಂಡಗಳಿಗೂ ದೊಡ್ಡ ಮಟ್ಟದ ಹಿನ್ನೆಡೆಯನ್ನ ಉಂಟು ಮಾಡಿದೆ.
ಅಕ್ಸರ್ ಪಟೇಲ್:
ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ಆಗಿರುವ ಅಕ್ಸರ್ ಪಟೇಲ್, ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಆಡಲು ಸಜ್ಜಾಗಿದ್ದರು. ನಿರೀಕ್ಷೆಯಂತೆ ತಂಡದಲ್ಲಿ ಸ್ಥಾನ ಪಡೆದಿದ್ದ ಅಕ್ಸರ್ ಪಟೇಲ್, ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಪರಿಣಾಮ ಕೊನೆ ಕ್ಷಣದಲ್ಲಿ ವಿಶ್ವಕಪ್ ತಂಡದಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ನಸೀಮ್ ಶಾ:
ಪಾಕಿಸ್ತಾನ ತಂಡದ ಪ್ರಮುಖ ವೇಗದ ಬೌಲರ್ ನಸೀಮ್ ಶಾ, ಗಾಯದ ಸಮಸ್ಯೆಯಿಂದಾಗಿ ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಏಷ್ಯಾಕಪ್ನಲ್ಲಿ ಪಾಲ್ಗೊಂಡಿದ್ದ ವೇಳೆ ಗಾಯದ ಸಮಸ್ಯೆಗೆ ಸಿಲುಕಿದ ನಸೀಮ್, ಏಕದಿನ ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಯುವ ವೇಗದ ಬೌಲರ್ನ ಗೈರು ಹಾಜರಿ ಪಾಕ್ ತಂಡದ ಬೌಲಿಂಗ್ ವಿಭಾಗಕ್ಕೆ ಹಿನ್ನಡೆ ಮೂಡಿಸಿದೆ.
ವನಿಂದು ಹಸರಂಗ:
ಶ್ರೀಲಂಕಾ ತಂಡದ ಪ್ರಮುಖ ಸ್ಪಿನ್ ಬೌಲರ್ ಆಗಿರುವ ವನಿಂದು ಹಸರಂಗ, 2023ರ ಏಕದಿನ ವಿಶ್ವಕಪ್ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಗಾಯದ ಸಮಸ್ಯೆ ಕಾರಣದಿಂದ ಏಷ್ಯಾಕಪ್ ಟೂರ್ನಿಯಲ್ಲೂ ಆಡುವ ಅವಕಾಶ ಕಳೆದುಕೊಂಡಿದ್ದ ಹಸರಂಗ, ವಿಶ್ವಕಪ್ಗೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ತಮ್ಮ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಹಸರಂಗ, ಭಾರತದಲ್ಲಿ ನಡೆಯುವ ವಿಶ್ವಕಪ್ನಲ್ಲಿ ಆಡಲಾಗದೆ ನಿರಾಸೆ ಅನುಭವಿಸಿದ್ದಾರೆ.
ಆಶ್ಟನ್ ಅಗರ್:
ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಿದ್ದ ಆಶ್ಟನ್ ಅಗರ್ ಸಹ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಕೊನೆ ಕ್ಷಣದಲ್ಲಿ ವಿಶ್ವಕಪ್ನ ತಂಡದಿಂದ ಹೊರಗುಳಿದಿರುವ ಅಗರ್, ಟೂರ್ನಿಯ ಮಧ್ಯಂತರದಲ್ಲಿ ತಂಡವನ್ನ ಕೂಡಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಎನ್ರಿಕ್ ನೋಕಿಯಾ:
ಸೌತ್ ಆಫ್ರಿಕಾ ತಂಡದ ಪ್ರಮುಖ ವೇಗದ ಬೌಲರ್ ಎನ್ರಿಕ್ ನೋಕಿಯಾ ಕೂಡ ವಿಶ್ವಕಪ್ನಲ್ಲಿ ಆಡುವ ಅವಕಾಶ ವಂಚಿತರಾಗಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ನೋಕಿಯಾ, ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಟೂರ್ನಿಗೆ ಅಲಭ್ಯರಾಗಿದ್ದಾರೆ. ಎನ್ರಿಕ್ ನೋಕಿಯಾ ಗಾಯದ ಸಮಸ್ಯೆಯಿಂದ ಈ ಹಿಂದೆ 2019ರ ಏಕದಿನ ವಿಶ್ವಕಪ್ನಲ್ಲೂ ಆಡುವ ಅವಕಾಶ ಕಳೆದುಕೊಂಡಿದ್ದರು.
CWC 2023, ODI Cricket, World Cup, Sports Karnataka