ಐಸಿಸಿ ಏಕದಿನ ವಿಶ್ವಕಪ್-2023 ಪಂದ್ಯಾವಳಿಗೆ ರೋಹಿತ್ ಶರ್ಮ ನಾಯಕತ್ವದ ಟೀಂ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ನಡುವೆ ಹಿಟ್ಮ್ಯಾನ್ ರೋಹಿತ್ ಶರ್ಮ ಕೂಡ ತವರಿನಲ್ಲಿ ನಡೆಯುವ ಮಹತ್ವದ ಟೂರ್ನಿಯಲ್ಲಿ ಏಕದಿನ ಕ್ರಿಕೆಟ್ನ ಹಲವು ದಾಖಲೆಗಳನ್ನ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ.
ಟೀಂ ಇಂಡಿಯಾದ ಪ್ರಮುಖ ಬ್ಯಾಟರ್ ಆಗಿರುವ ರೋಹಿತ್ ಶರ್ಮಾ, ತಮ್ಮ ಮೂರನೇ ವಿಶ್ವಕಪ್ನಲ್ಲಿ ಭಾರತದ ಪರ ಕಣಕ್ಕಿಳಿಯುತ್ತಿದ್ದಾರೆ. 2015ರಲ್ಲಿ ತಂಡದ ಆಟಗಾರನಾಗಿ ಆಡಿದ್ದ ರೋಹಿತ್, 2019ರ ಏಕದಿನ ವಿಶ್ವಕಪ್ನಲ್ಲಿ ಭರ್ಜರಿ ಬ್ಯಾಟಿಂಗ್ನಿಂದ ತಂಡಕ್ಕೆ ಆಸರೆಯಾಗಿದ್ದರು. ಇದೀಗ 2023ರ ಏಕದಿನ ವಿಶ್ವಕಪ್ನಲ್ಲಿ ತಂಡದ ನಾಯಕತ್ವದ ಹೊಣೆ ಹೊತ್ತಿರುವ ರೋಹಿತ್, ತವರಿನಲ್ಲಿ ತಂಡಕ್ಕೆ ವಿಶ್ವಕಪ್ ತಂದುಕೊಡುವ ದೊಡ್ಡ ನಿರೀಕ್ಷೆ ಹೊಂದಿದ್ದಾರೆ. ಹೀಗಾಗಿ ವಿಶ್ವಕಪ್ಗಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ರೋಹಿತ್ ಶರ್ಮಾ, ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಕ್ರಿಸ್ ಗೇಯ್ಲ್ ಅವರುಗಳ ದಾಖಲೆ ಜೊತೆಗೆ ಇನ್ನು ಹಲವು ದಾಖಲೆಗಳನ್ನ ಬ್ರೇಕ್ ಮಾಡುವ ಅವಕಾಶ ಹೊಂದಿದ್ದಾರೆ.
ವಿಶ್ವಕಪ್ನಲ್ಲಿ ಹೆಚ್ಚು ಶತಕಗಳು:
ಏಕದಿನ ವಿಶ್ವಕಪ್ನಲ್ಲಿ ಹೆಚ್ಚು ಶತಕ ಬಾರಿಸಿದ ತೆಂಡೂಲ್ಕರ್ ಅವರ ದಾಖಲೆ ಮುರಿಯುವ ಅವಕಾಶ ರೋಹಿತ್ ಶರ್ಮಾ ಅವರಿಗೆ ಲಭಿಸಿದೆ. ಪ್ರಸ್ತುತ ಏಕದಿನ ವಿಶ್ವಕಪ್ನಲ್ಲಿ ಆಡಿರುವ 17 ಪಂದ್ಯಗಳಲ್ಲಿ ರೋಹಿತ್ ಶರ್ಮಾ, 6 ಶತಕಗಳನ್ನ ಬಾರಿಸಿ, ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಮತ್ತೊಂದು ಶತಕ ದಾಖಲಿಸಿದರೆ ಸಚಿನ್ ದಾಖಲೆ ಸರಿಗಟ್ಟುವ ಅವಕಾಶ ಹೊಂದಿದ್ದಾರೆ. 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ, ಐದು ಶತಕಗಳನ್ನು ಸಿಡಿಸಿದ್ದರು. ಹೀಗಾಗಿ ಭಾರತದಲ್ಲಿ ನಡೆಯುವ ವಿಶ್ವಕಪ್ನಲ್ಲೂ ಇದೇ ಫಾರ್ಮ್ ಮುಂದುವರಿಸುವ ನಿರೀಕ್ಷೆ ಇದೆ.
ವಿಶ್ವಕಪ್ನಲ್ಲಿ 1000 ರನ್ಗಳು:
36 ವರ್ಷದ ರೋಹಿತ್ ಶರ್ಮ, ಏಕದಿನ ವಿಶ್ವಕಪ್ನಲ್ಲಿ 1000 ರನ್ಗಳನ್ನ ಪೂರೈಸುವ ಅವಕಾಶ ಹೊಂದಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ಈವರೆಗೂ ಮೂವರು ಬ್ಯಾಟ್ಸ್ಮನ್ಗಳು ಮಾತ್ರವೇ ಈ ಸಾಧನೆ ಮಾಡಿದ್ದು, ಸಚಿನ್ ತೆಂಡೂಲ್ಕರ್(2278 ರನ್), ವಿರಾಟ್ ಕೊಹ್ಲಿ(1030 ರನ್) ಮತ್ತು ಸೌರವ್ ಗಂಗೂಲಿ (1006 ರನ್) ವಿಶ್ವಕಪ್ನಲ್ಲಿ 1000ಕ್ಕೂ ಹೆಚ್ಚು ರನ್ಗಳಿಸಿದ ಭಾರತೀಯ ಬ್ಯಾಟರ್ಗಳಾಗಿದ್ದಾರೆ. ಇದೀಗ 4ನೇ ಬ್ಯಾಟರ್ ಆಗಿ ರೋಹಿತ್ ಶರ್ಮಾ ಕೂಡ 1000 ರನ್ಗಳ ಗಡಿದಾಟುವ ಹೊಸ್ತಿಲಲ್ಲಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ ಆಡಿರುವ 17 ಪಂದ್ಯಗಳಲ್ಲಿ 65.20 ರ ಸರಾಸರಿಯಲ್ಲಿ 978 ರನ್ಗಳಿಸಿದ್ದಾರೆ.
ಹೆಚ್ಚು ಸಿಕ್ಸರ್ಗಳ ದಾಖಲೆ:
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಸಿಕ್ಸರ್ಗಳನ್ನ ಬಾರಿಸಿರುವ ಬ್ಯಾಟರ್ಗಳ ಲಿಸ್ಟ್ನಲ್ಲಿ ಅಗ್ರಸ್ಥಾನಕ್ಕೇರುವತ್ತ ರೋಹಿತ್ ಶರ್ಮಾ ಸಜ್ಜಾಗಿದ್ದಾರೆ. ಪ್ರಸ್ತುತ ಈ ಲಿಸ್ಟ್ನಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್, 553 ಸಿಕ್ಸ್ಗಳೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ಇವರ ದಾಖಲೆ ಮುರಿಯುವ ಅವಕಾಶ ಹೊಂದಿರುವ ರೋಹಿತ್ 451 ಪಂದ್ಯಗಳಲ್ಲಿ 551 ಸಿಕ್ಸರ್ಗಳನ್ನ ಬಾರಿಸಿದ್ದು, ಗೇಯ್ಲ್ ದಾಖಲೆಯನ್ನ ಹಿಂದಿಕ್ಕಲು ಮೂರು ಸಿಕ್ಸರ್ಗಳ ಅಗತ್ಯವಿದೆ.
18 ರನ್ಗಳ ಹೊಸ್ತಿಲಲ್ಲಿ:
ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 18000 ರನ್ಗಳನ್ನ ಪೂರೈಸುವ ಸನಿಹದಲ್ಲಿದ್ದಾರೆ. ಪ್ರಸ್ತುತ 451 ಪಂದ್ಯಗಳಲ್ಲಿ 17,642 ರನ್ ಗಳಿಸಿರುವ ಹಿಟ್ಮ್ಯಾನ್, ಭಾರತದ 5ನೇ ಬ್ಯಾಟರ್ ಆಗಿ ಈ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದು, ಇದಕ್ಕಾಗಿ 352 ರನ್ಗಳ ಅಗತ್ಯವಿದೆ. ದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಪರ, ಸಚಿನ್ ತೆಂಡೂಲ್ಕರ್ (34357 ರನ್), ವಿರಾಟ್ ಕೊಹ್ಲಿ (25767 ರನ್), ರಾಹುಲ್ ದ್ರಾವಿಡ್ (24064 ರನ್) ಮತ್ತು ಸೌರವ್ ಗಂಗೂಲಿ(18433 ರನ್) ಟಾಪ್-4 ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100ನೇ ಅರ್ಧಶತಕ ಬಾರಿಸಲು ರೋಹಿತ್ ಶರ್ಮಾಗೆ ಕೇವಲ 3 ಅರ್ಧಶತಕಗಳ ಅಗತ್ಯವಿದ್ದು, ವಿಶ್ವಕಪ್ನಲ್ಲಿ ಈ ದಾಖಲೆ ಬರೆಯುವ ನಿರೀಕ್ಷೆ ಇದೆ.
CWC 2023, Rohit Sharma, Team India, ODI Cricket, Sports Karnataka