ಐಪಿಎಲ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಕೆಲ ದಿನಗಳಷ್ಟೇ ಉಳಿದಿದೆ. ಅದಾಗಲೇ 10 ಫ್ರಾಂಚೈಸಿಗಳು ಯಾವ ಆಟಗಾರ ಬೇಕು…? ಎಷ್ಟು ದುಡ್ಡು ಕೊಡಬೇಕು..? ಉಳಿಕೆ ಆಗುವ, ಖರ್ಚಾಗಬಹುದಾದ ದುಡ್ಡಿನ ಲೆಕ್ಕಾಚಾರ ನಡೆಸುತ್ತಿವೆ. ಈ ಮಧ್ಯೆ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ.
ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಆಟಗಾರರ ಮೆಗಾ ಹರಾಜು ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಹರಾಜು ಬಗ್ಗೆ ವಿಶೇಷ ಪ್ಲಾನ್ ಮಾಡಿಕೊಂಡಂತಿದೆ. ಆ ಪ್ಲಾನ್ ಭಾಗವಾಗಿ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹರಾಜಿಗೂ ಮೊದಲು ತಂಡಕ್ಕೆ ಯಾವ ಆಟಗಾರರನ್ನು ಖರೀದಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಮ್ಯಾನೇಜ್ ಮೆಂಟ್ ಜೊತೆಗೆ ಚರ್ಚಿಸಲು ಧೋನಿ ಚೆನ್ನೈ ಫ್ರಾಂಚೈಸಿ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಐಪಿಎಲ್ನ ಯಶಸ್ವಿ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ, ಸಿಎಸ್ಕೆ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಸಿಎಸ್ಕೆ ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ, ಮೊಯಿನ್ ಅಲಿ ಮತ್ತು ಆರಂಭಿಕ ಆಟಗಾರ ಋತುರಾಜ್ ಗಾಯ್ಕವಾಡ್ ರನ್ನು ರಿಟೈನ್ ಮಾಡಿಕೊಂಡಿದೆ. ಉಳಿದ ಆಟಗಾರರ ಬಗ್ಗೆ ಪ್ಲಾನ್ ಮಾಡುತ್ತಿದೆ.