ಕತಾರ್ ವಿಶ್ವಕಪ್ ಫುಟ್ಬಾಲ್ ಪಂದ್ಯದ ವೇಳೆ ತಾರಾ ಆಟಗಾರ ರೊನಾಲ್ಡೊ ಅವರನ್ನು ಬೆಂಚ್ನಲ್ಲಿ ಕೂರಿಸಿದ ಕುರಿತು ಸಹ ಆಟಗಾರ ಕಾರಾವಾಲೊ ರಿವೀಲ್ ಮಾಡಿದ್ದಾರೆ.
ಮೊರಾಕ್ಕೊ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ತನ್ನ ಆಡುವ ಬಳಗದಲ್ಲಿ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಕೈಬಿಟ್ಟು ಅಚ್ಚರಿ ಮೂಡಿಸಿತ್ತು.
ಇವರ ಬದಲಿಗೆ ಹ್ಯಾಟ್ರಿಕ್ ಗೋಲು ಹೊಡೆದಿದ್ದ ಗೊನಾಕಾಲೊ ರೊಮೊಸ್ ಅವರಿಗೆ ಸ್ಥಾನ ನೀಡಲಾಗಿತ್ತು.
ಅಂದಿನ ಸಂದರ್ಭದ ಕುರಿತು, ತುಂಬ ಕಠಿಣವಾದ ಸಂದರ್ಭ. ರೊನಾಲ್ಡೊಗೆ ಮ್ಯಾಂಚೆಸ್ಟರ್ ಜೊತೆ ಅಸಮಾಧಾನವಿತ್ತು. ನಂತರ ರೊನಾಲ್ಡೊ ರಾಷ್ಟ್ರೀಯ ತಂಡದ ಪರ ಆಡಲು ಶುರು ಮಾಡಿದರು. ಅಂದು ಮ್ಯಾನೇಜರ್ ಫೆರ್ನಾಂಡೊ ಸಾಂಟೊಸ್ ರೋನಾಲ್ಡೊ ಅವರನ್ನು ಆಡುವ ಬಳಗದಲ್ಲಿ ಸೇರಿಸಿರಲಿಲ್ಲ. ಸಹಜವಾಗಿ ರೊನಾಲ್ಡೊ ಅಸಮಾಧಾನಗೊಂಡಿದ್ದರು ಎಂದು ತಿಳಿಸಿದ್ದಾರೆ.
ಬೆಂಚ್ನಲ್ಲಿ ರೊನಾಲ್ಡೊ ಬೇಸರಗೊಂಡಿದ್ದರು. ಆದರೂ ಅವರು ತಂಡದ ಜೊತೆಗಿದ್ದರು. ಎಲ್ಲಿಯೂ ತಂಡವನ್ನು ಬಿಟ್ಟು ಹೋಗದಿರಲು ನಿರ್ಧರಿಸಿದ್ದರು. ಆಡಿದಿದ್ದರೂ ನಮಗೆ ಸಹಾಯ ಮಾಡಿದರು. ತಂಡಕ್ಕೆ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು ಅನ್ನೋದು ಗೊತ್ತಿತ್ತು ಎಂದು ಕಾರಾವಾಲೊ ಹೇಳಿದ್ದಾರೆ.