ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 25 ಸಾವಿರ ರನ್ ಪೂರೈಸಿ ವಿಶ್ವ ದಾಖಲೆ ಬರೆದಿದ್ದಾರೆ. ಈ ಮೈಲುಗಲ್ಲು ಮುಟ್ಟಿದ 6ನೇ ಅಂತಾರಾಷ್ಟ್ರೀಯ ಆಟಗಾರರಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ 2ನೇ ಇನ್ನಿಂಗ್ಸ್ನಲ್ಲಿ 20 ರನ್ ಗಳಿಸಿದ ವಿರಾಟ್ ಕೊಹ್ಲಿ ಹಲವಾರು ದಾಖಲೆಗಳನ್ನು ಮುಡಿಗೇರಿಸಿಕೊಂಡರು. ಮೂರು ಆವೃತ್ತಿಗಳಿಂದ 492 ಪಂದ್ಯಗಳಿಂದ 549 ಇನ್ನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 25 ಸಾವಿರ ರನ್ ಪೂರೈಸಲು 577 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ ಸಚಿನ್ ಅವರ ದಾಖಲೆ ಮುರಿದಿದ್ದಾರೆ.
2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ 106 ಟೆಸ್ಟ್ಗಳಲ್ಲಿ 8,195 ರನ್, ಏಕದಿನ ಕ್ರಿಕೆಟ್ನಲ್ಲಿ 271 ಪಂದ್ಯಗಳಿಂದ 12,809 ರನ್, ಟಿ20ಯಲ್ಲಿ 115 ಪಂದ್ಯಗಳಿಂದ 4,008ರನ್ ಕಲೆ ಹಾಕಿದ್ದಾರೆ.
3 ಆವೃತ್ತಿಗಳಿಂದ ಕೊಹ್ಲಿ 25, 012 ರನ್ ಕಲೆ ಹಾಕಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ, ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾ ತಂಡದ ಜಾಕ್ ಕಾಲಿಸ್ ಈ ಹಿಂದೆ 25 ಸಾವಿರ ರನ್ ಪೂರೈಸಿದ ಆಟಗಾರರಾಗಿದ್ದಾರೆ.