Cristiano Ronaldo – ಫೇಕ್ ನ್ಯೂಸ್.. ಸ್ಪೋರ್ಟಿಂಗ್ ಡಿ ಪೋರ್ಚ್‍ಗಲ್ ತಂಡ ಸೇರಲ್ಲ..!

ಕ್ರಿಸ್ಟಿಯಾನೊ ರೊನಾಲ್ಡೊ. ಪೋರ್ಚ್‍ಗಲ್ ಅಟಗಾರ. ಸದ್ಯ ಮಾಂಚೆಸ್ಟರ್ ಯುನೈಟೆಡ್ ತಂಡದ ಸೂಪರ್ ಸ್ಟಾರ್. ಸಿಎಆರ್7 ಬ್ರ್ಯಾಂಡ್ ಖ್ಯಾತಿಯ ಕ್ರಿಸ್ಟಿಯಾನೊ ರೊನಾಲ್ಡೊ ಅವರು ವಿಶ್ವದ ದುಬಾರಿ ಬೆಲೆಯ ಆಟಗಾರ. ಹಾಗೇ ಶ್ರೀಮಂತ ಆಟಗಾರನೂ ಹೌದು. ಅಷ್ಟೇ ಅಲ್ಲ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಫುಟ್ ಬಾಲ್ ಮಾಂತ್ರಿಕ.
ಇದೀಗ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಡೆಟ್ ತಂಡದಿಂದ ಹೊರಬರುತ್ತಿದ್ದಾರೆ ಅನ್ನೋ ಸುದ್ದಿಗಳು ಸಾಕಷ್ಟು ಕೇಳಿಬರುತ್ತಿವೆ.
ಇತ್ತೀಚೆಗೆ ಯುಎಇ ಕ್ಲಬ್ ತಂಡವನ್ನು ಸೇರಿಕೊಳ್ಳುತ್ತಾರೆ ಅನ್ನೋ ವದಂತಿಗಳು ಕೇಳಿಬಂದಿದ್ದವು.

ಇದೀಗ ಪೋರ್ಚ್‍ಗಲ್ ನ ಸ್ಪೋರ್ಟಿಂಗ್ ಕ್ಲಬ್ ಡಿ ಪೋರ್ಚ್‍ಗಲ್ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಪೋರ್ಚ್‍ಗಲ್ ನ ಮಾಧ್ಯಮವೊಂದು ವರದಿ ಮಾಡಿತ್ತು. ಅಲ್ಲದೆ ಅವರ ಕಾರ್ ನ ಫೋಟೋವನ್ನು ಕೂಡ ಹಾಕಿತ್ತು.
ಇದೀಗ ಕ್ರಿಸ್ಟಿಯಾನೋ ರೊನಾಲ್ಡೊ ಅವರು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಫೇಕ್ ಅನ್ನೋ ಪದವನ್ನು ಬರೆದುಕೊಂಡು ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಅಂದ ಹಾಗೇ ಸ್ಪೋರ್ಟಿಂಗ್ ಡಿ ಪೋರ್ಚ್‍ಗಲ್ ಕ್ಲಬ್ ತಂಡ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಬದುಕು ಕೊಟ್ಟ ತಂಡವಾಗಿದೆ. 18ರ ಹರೆಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿತ್ತು. ಇದೀಗ ಕ್ರಿಸ್ಟಿಯಾನೋ ಹೆಮ್ಮರವಾಗಿ ಬೆಳೆದು ನಿಂತ್ರೂ ಸ್ಪೋರ್ಟಿಂಗ್ ಡಿ ಕ್ಲಬ್ ಅನ್ನು ಮಾತ್ರ ಮರೆತಿಲ್ಲ. ಫುಟ್ ಬಾಲ್ ಗೆ ವಿದಾಯ ಹೇಳುವ ಮುನ್ನ ಒಂದು ಬಾರಿಯಾದ್ರೂ ಸ್ಪೋರ್ಟಿಂಗ್ ಡಿ ಪೋರ್ಚ್ ಗಲ್ ತಂಡದ ಪರವಾಗಿ ಆಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದರು.
ಒಂದು ವೇಳೆ ನನಗೆ ಅವತ್ತು ಅವಕಾಶ ನೀಡದೇ ಇರುತ್ತಿದ್ರೆ ನಾನು ಮೆಕ್ ಡೋನಾಲ್ಡ್ ನಲ್ಲಿ ಕೆಲಸ ಮಾಡಬೇಕಿತ್ತು ಎಂದು ಕೂಡ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದರು.
ಒಟ್ಟಿನಲ್ಲಿ ಸದ್ಯದ ಗಾಸೀಪ್ ಗಳಿಗೆ ರೊನಾಲ್ಡೊ ಅವರು ತೆರೆ ಎಳೆದಿದ್ದಾರೆ. ಆದ್ರೆ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡದೊಳಗಿನ ಗೊಂದಲಗಳಿಂದ ಸಾಕಷ್ಟು ನಿರಾಸೆ ಅನುಭವಿಸಿರುವುದಂತೂ ಸತ್ಯ.