Commonwealth Games 2022- ಭಾರತದ ಬ್ಯಾಡ್ಮಿಂಟನ್ ತಂಡ
ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಒಟ್ಟು ಹತ್ತು ಬ್ಯಾಡ್ಮಿಂಟನ್ ಆಟಗಾರರು ಕಣದಲ್ಲಿದ್ದಾರೆ.
ಐದು ವಿಭಾಗದಲ್ಲೂ ಕಣಕ್ಕಿಳಿಯಲಿರುವ ಭಾರತೀಯ ಆಟಗಾರರು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಅದರಲ್ಲೂ ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದುಕೊಂಡಿರುವ ಪಿ.ವಿ. ಸಿಂಧು ಪದಕ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ.
ಹಾಗೇ ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಕೂಡ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಇನ್ನೊಂದೆಡೆ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಪದಕ ಗೆಲ್ಲುವ ಭರವಸೆಯಲ್ಲಿದ್ದಾರೆ.
ಮಿಕ್ಸೆಡ್ ಡಬಲ್ಸ್ ನಲ್ಲೂ ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಹಾಗೂ ಮಹಿಳೆಯರ ಡಬಲ್ಸ್ ನಲ್ಲಿ ಗಾಯತ್ರಿ ಗೋಪಿಚಂದ್ ಮತ್ತು ತ್ರಿಸಾ ಜೋಲಿ ಕೂಡ ಶ್ರೇಷ್ಠ ಪ್ರದರ್ಶನ ನೀಡಿ ಅಚ್ಚರಿಯ ಫಲಿತಾಂಶವನ್ನು ನೀಡಬಹುದು.
ಕಾಮನ್ ವೆಲ್ತ್ ಗೇಮ್ಸ್ 2022- ಭಾರತ ಬ್ಯಾಡ್ಮಿಂಟನ್ ತಂಡ
ಪುರುಷರ ಸಿಂಗಲ್ಸ್ – ಲಕ್ಷ್ಯ ಸೇನ್, ಕೆ. ಶ್ರೀಕಾಂತ್
ಮಹಿಳಾ ಸಿಂಗಲ್ಸ್ – ಪಿ.ವಿ. ಸಿಂಧು, ಆಕರ್ಷಿ ಕಶ್ಯಪ್
ಪುರುಷರ ಡಬಲ್ಸ್ – ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ
ಮಹಿಳಾ ಡಬಲ್ಸ್ – ಗಾಯತ್ರಿ ಗೋಪಿಚಂದ್ ಮತ್ತು ತ್ರಿಸಾ ಜೋಲಿ
ಮಿಕ್ಸೆಡ್ ಡಬಲ್ಸ್ – ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ