ಭಾರತದಲ್ಲಿ ನಡೆಯುವ ಐಪಿಎಲ್ ಟೂರ್ನಿಗಳಲ್ಲಿ ವಿದೇಶಿ ಆಟಗಾರರು ಭಾಗವಹಿಸುತ್ತಾರೆ. ಆದರೆ ವಿದೇಶಿ ಟಿ20 ಲೀಗ್ ( T20 League)ಗಳಲ್ಲಿ(Cricket League) ಆಡಲು ಭಾರತೀಯ ಕ್ರಿಕೆಟಿಗರಿಗೆ ಅನುಮತಿ ಇಲ್ಲ. ಅಂತರಾಷ್ಟ್ರೀಯ ಕ್ರಿಕೆಟಿಗರು ಮಾತ್ರವಲ್ಲ, ಭಾರತದ ದೇಶೀಯ ಪಂದ್ಯ ಆಡುವ ಆಡುವ ಕ್ರಿಕೆಟಿಗರು ಕೂಡ ಬೇರೆ ಟಿ20 ಟೂರ್ನಿಗಳಲ್ಲಿ ಆಡುವ ಹಾಗಿಲ್ಲ. ಆದರೆ ಈಗ ಜಮಾನ ಬದಲಾಗುತ್ತಿದೆ. ಫ್ರಾಂಚೈಸಿಗಳ ತಂತ್ರ ಬಿಸಿಸಿಐ (BCCI) ಪ್ಲಾನ್ ಅನ್ನು ಉಲ್ಟಾ ಮಾಡುತ್ತಿದೆ.
ಐಪಿಎಲ್ ಫ್ರಾಂಚೈಸಿಗಳಿಂದ ಒತ್ತಡವಿರುವ ಕಾರಣ ವಿದೇಶಿ ಟಿ20 ಲೀಗ್ಗಳಲ್ಲಿ ಆಡಲು ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಅನುಮತಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ನಿರ್ಧರಿಸಲಿದೆ ಎಂದು ಹೇಳಲಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೊಸದಾಗಿ ಆರಂಭಿಸುತ್ತಿರುವ ಟಿ20 ಲೀಗ್ನ ಎಲ್ಲಾ 6 ತಂಡಗಳನ್ನು ಖರೀದಿಸಿದ ಐಪಿಎಲ್ ಫ್ರಾಂಚೈಸಿಗಳು, ಬಿಸಿಸಿಐ ಮೇಲೆ ಒತ್ತಡ ಹೇರುತ್ತಿವೆ ಎನ್ನಲಾಗಿದೆ. ಸದ್ಯ ಭಾರತೀಯ ಕ್ರಿಕೆಟಿಗರು ವಿದೇಶಿ ಲೀಗ್ಗಳಲ್ಲಿ ಆಡಬೇಕಿದ್ದರೆ, ಬಿಸಿಸಿಐ ನಿಯಮದ ಪ್ರಕಾರ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಬೇಕಿದೆ.
ಬಿಸಿಸಿಐ ಕೇಂದ್ರ ಗುತ್ತಿಗೆ ಹೊಂದಿರದ, ರಾಜ್ಯ ತಂಡಗಳಲ್ಲಿ ಖಾಯಂ ಸ್ಥಾನ ಪಡೆಯದ ಆಟಗಾರಿರಿಗೆ ಆಸ್ಪ್ರೇಲಿಯಾದ ಬಿಗ್ಬ್ಯಾಶ್ (BBL), ಇಂಗ್ಲೆಂಡ್ನ ದಿ ಹಂಡ್ರೆಡ್, ದಕ್ಷಿಣ ಆಫ್ರಿಕಾ ಟಿ20 ಲೀಗ್, ಬಾಂಗ್ಲಾ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ಗಳಲ್ಲಿ(CPL) ಆಡಲು ಅನುಮತಿ ಸಿಗಬಹುದು. ಇದರರ್ಥ ವಿರಾಟ್ ಕೊಹ್ಲಿ, ರೋಹಿತ್ ರೋಹಿತ್, ಜಸ್ಪ್ರೀತ್ ಬುಮ್ರಾ ಇಲ್ಲವೇ ರಿಷಭ್ ಪಂತ್ರಂತಹ ತಾರಾ ಆಟಗಾರರನ್ನು ಐಪಿಎಲ್ ಹೊರತುಪಡಿಸಿ ಉಳಿದ್ಯಾವ ಟಿ20 ಲೀಗ್ಗಳಲ್ಲಿ ನೋಡಲು ಸಾಧ್ಯವಿಲ್ಲ.
ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ ವಿದೇಶಿ ಲೀಗ್ಗಳಲ್ಲಿ ಆಡಲು ಅನುಮತಿ ನೀಡಿದಂತೆ ಪುರುಷರ ಕ್ರಿಕೆಟಿಗರಿಗೂ ಸಹ ಅವಕಾಶ ಸಿಗಬಹುದು. ಈಗಾಗಲೇ ಹರ್ಮನ್ಪ್ರೀತ್ ಕೌರ್, ಶಫಾಲಿ ವರ್ಮಾ ಸೇರಿದಂತೆ ಹಲವು ಆಟಗಾರ್ತಿಯರು ಬಿಗ್ಬ್ಯಾಶ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಒಟ್ಟಿನಲ್ಲಿ ಬದಲಾವಣೆಗೆ ಬಿಸಿಸಿಐ ಒಗ್ಗಿಕೊಳ್ಳುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಫ್ರಾಂಚೈಸಿಗಳುಕೂಡ ಬೇರೆ ಬೇರೆಕಂಡೀಷನ್ಗಳನ್ನು ಹಾಕಬಹುದು ಅನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.