ಭಾರತದ ಪುರುಷರ ಕ್ರಿಕೆಟ್ ತಂಡದ ಅಬ್ಬರದ ನಡುವೆ ನ್ಯೂಜಿಲೆಂಡ್ ಆತಿಥ್ಯ ನೀಡುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಬಗ್ಗೆ ಮಾತೇ ಮರೆತುಹೋಗಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ಭಾರತ ಟೂರ್ನಿಯ ಫೆವರೀಟ್ಗಳು. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕೂಡ ಕಪ್ ಮೇಲೆ ಕೈ ಇಡುವ ಯೋಚನೆಯಲ್ಲಿವೆ. ಮಹಿಳಾ ವಿಶ್ವಕಪ್ನ ಕಂಪ್ಲೀಟ್ ಡಿಟೇಲ್ಸ್ ಹೀಗಿದೆ.
08: ಭಾಗವಹಿಸುವ ತಂಡಗಳು: ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ಇಂಡೀಸ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್
07: ಎಲ್ಲಾ ತಂಡಗಳಿಗೆ ಲೀಗ್ನಲ್ಲಿ ಸಿಗುವ ಪಂದ್ಯಗಳು. ಅಗ್ರ 4 ತಂಡಗಳು ಸೆಮಿಫೈನಲ್ಗೆ ಎಂಟ್ರಿ
04: ಮಾರ್ಚ್ 4ರಿಂದ ಟೂರ್ನಿ ಆರಂಭ. ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿರುವ ವೆಸ್ಟ್ಇಂಡೀಸ್
06: ನ್ಯೂಜಿಲೆಂಡ್ ಆತಿಥ್ಯ ನೀಡುವ ಈ ಟೂರ್ನಿ 6 ಮೈದಾನಗಳಲ್ಲಿ ನಡೆಯಲಿದೆ. ಹ್ಯಾಂಗ್ಲೆ ಓವಲ್ ಕ್ರೈಸ್ಟ್ ಚರ್ಚ್, ಸೆಡನ್ ಪಾರ್ಕ್ ಹ್ಯಾಮಿಲ್ಟನ್, ಬೇಸಿನ್ ರಿಸರ್ವ್ ವೆಲ್ಲಿಂಗ್ಟನ್, ಯೂನಿವರ್ಸಿಟಿ ಓವಲ್ ಡ್ಯುನೆಡಿನ್, ಈಡನ್ ಪಾರ್ಕ್ ಆಕ್ಲಂಡ್ ಮತ್ತು ಬೇ ಓವಲ್ ಮೌಂಟ್ ಮಂಗ್ನುಯಿ ಆತಿಥ್ಯ ನೀಡಲಿವೆ.
28: ಲೀಗ್ ಹಂತದಲ್ಲಿ ನಡೆಯುವ ಒಟ್ಟು ಪಂದ್ಯಗಳು
2: ಸೆಮಿಫೈನಲ್ ಪಂದ್ಯಗಳು
1: ಫೈನಲ್ ಮ್ಯಾಚ್