ಬರ್ಮಿಂಗ್ಹ್ಯಾಂ (Birmingham) ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಈ ಬಾರಿ ಕ್ರಿಕೆಟ್ ಹೊಸದಾಗಿ ಸೇರ್ಪಡೆಯಾಗಿದೆ. ಭಾರತದ ಪುರುಷರ ತಂಡ ಇದರಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಮಹಿಳಾ ತಂಡವನ್ನು ಕಳುಹಿಸಲು ಬಿಸಿಸಿಐ (BCCI) ಸಮ್ಮತಿಸಿದೆ. ಹೀಗಾಗಿ ಮಹಿಳಾ ತಂಡ ಈಗಾಗಲೇ ಇಂಗ್ಲೆಂಡ್ ಸೇರಿಕೊಳ್ಳುವ ಪ್ರಯತ್ನದಲ್ಲಿದೆ. ಚಿನ್ನದ ಮೇಲೆ ಕಣ್ಣಿಟ್ಟಿರುವ ಹರ್ಮನ್ಪ್ರಿತ್ ಕೌರ್ (Harmanpreet Kaur)ಬಳಗ ಇತಿಹಾಸ ನಿರ್ಮಿಸುವ ಯೋಚನೆಯಲ್ಲಿದೆ.
ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ ಜುಲೈ 28ರಿಂದ ಆರಂಭವಾಗಲಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಬರ್ಮಿಂಗ್ಹ್ಯಾಮ್ಗೆ ಪ್ರಯಾಣಿಸಬೇಕಿರುವ ಭಾರತ ಮಹಿಳಾ ಕ್ರಿಕೆಟ್ (Team India) ತಂಡದ 3 ಆಟಗಾರ್ತಿಯರು ಸೇರಿದಂತೆ ಒಟ್ಟು 6 ಮಂದಿಗೆ ಇನ್ನೂ ವೀಸಾ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಸದ್ಯ ಬೆಂಗಳೂರಿನಲ್ಲಿ ಅಭ್ಯಾಸ ಶಿಬಿರದಲ್ಲಿ ತೊಡಗಿಸಿಕೊಂಡಿರುವ ಆಟಗಾರ್ತಿಯರು ಭಾನುವಾರ ಇಂಗ್ಲೆಂಡ್ಗೆ ಪ್ರಯಾಣಿಸಬೇಕಿದೆ. ಆದರೆ ವೀಸಾ ಸಿಗದ ಕಾರಣ ಪ್ರಯಾಣ ತಡವಾಗುವ ಸಾಧ್ಯತೆ ಇದೆ. 3 ಆಟಗಾರ್ತಿಯರು, 3 ಸಹಾಯಕ ಸಿಬ್ಬಂದಿಗೆ ಕೂಡಲೇ ವೀಸಾ ವ್ಯವಸ್ಥೆ ಮಾಡುವಂತೆ ಬಿಸಿಸಿಐ, ಭಾರತ ಒಲಿಂಪಿಕ್ ಸಂಸ್ಥೆಗೆ ಮನವಿ ಮಾಡಿದೆ.
ಟಿ20 ಮಾದರಿಯ ಟೂರ್ನಿಯಲ್ಲಿ ಭಾರತ ಜುಲೈ 29ಕ್ಕೆ ಆಸ್ಪ್ರೇಲಿಯಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಜುಲೈ 31ಕ್ಕೆ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿರುವ ತಂಡ, ಆಗಸ್ಟ್ 3ಕ್ಕೆ ಬಾರ್ಬಡೋಸ್ ವಿರುದ್ಧ ಸೆಣಸಲಿದೆ.