ಭಾರತದ ವೇಗದ ಬೌಲರ್ ಎಸ್ ಶ್ರೀಶಾಂತ್ ಅವರ ಐಪಿಎಲ್ ನಲ್ಲಿ ಮತ್ತೊಮ್ಮೆ ಆಡುವ ಕನಸು ನನಸಾಗಬಹುದು. ಐಪಿಎಲ್ 2022 ರ ಮೆಗಾ ಹರಾಜಿಗೆ 590 ಆಟಗಾರರನ್ನು ಶಾರ್ಟ್‌ಲಿಸ್ಟ್ ಬಿಡುಗಡೆ ಮಾಡಲಾಗಿದೆ ಮತ್ತು ಅದರಲ್ಲಿ ಶ್ರೀಶಾಂತ್ ಅವರನ್ನು ಸೇರಿಸಗಿದೆ. ಇದರರ್ಥ ಅವರು ಈ ಹರಾಜಿನಲ್ಲಿ ಭಾಗವಹಿಸಲು ಅರ್ಹರು ಎಂದು ಪರಿಗಣಿಸಲಾಗುತ್ತದೆ. ಈ ಹರಾಜಿನಲ್ಲಿ ಭಾಗವಹಿಸಲು 1200 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು, ಆದರೆ ಈ ಪೈಕಿ 590 ಆಟಗಾರರು ಮಾತ್ರ ಹರಾಜಿನಲ್ಲಿ ಭಾಗವಹಿಸಲು ಅರ್ಹರು ಎಂದು ಪರಿಗಣಿಸಲಾಗಿದೆ.
ಎಸ್ ಶ್ರೀಶಾಂತ್ ಅವರು ಈ ಬಾರಿ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು 50 ಲಕ್ಷ ರೂಪಾಯಿಗಳಿಗೆ ತಿಳಿಸಿದ್ದಾರೆ. ಐಪಿಎಲ್ 2021 ರ ಹರಾಜಿನಲ್ಲಿ ಅವರು ತಮ್ಮ ಮೂಲ ಬೆಲೆಯನ್ನು 75 ಲಕ್ಷ ರೂಪಾಯಿಗಳಿಗೆ ಇಟ್ಟುಕೊಂಡಿದ್ದರು. ಈ ಬಾರಿ ಅವರು ತಮ್ಮ ಬೆಲೆಯನ್ನು ಕಡಿತಗೊಳಿಸಿ ಕೊಂಡಿದ್ದಾರೆ. ಮತ್ತು ಅವರು ದೇಶೀಯ ಕ್ರಿಕೆಟ್‌ನಲ್ಲಿಯೂ ಆಡುತ್ತಿದ್ದಾರೆ. ಶ್ರೀಶಾಂತ್ ಕೊನೆಯ ಬಾರಿಗೆ 2013 ರಲ್ಲಿ ಐಪಿಎಲ್‌ನಲ್ಲಿ ಆಡಿದ್ದರು ಮತ್ತು ನಂತರ ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ನಿಷೇಧಕ್ಕೊಳಗಾಗಿದ್ದರು. ಇದಾದ ಬಳಿಕ ನ್ಯಾಯಾಲಯ ಏಳು ವರ್ಷಗಳ ಕಾಲ ನಿಷೇಧ ಹೇರಿದ್ದು, ಅದರ ನಂತರ ನಿರಂತರವಾಗಿ ಐಪಿಎಲ್‌ನಲ್ಲಿ ಆಡಲು ಪ್ರಯತ್ನಿಸುತ್ತಿದ್ದರು ಫಲಿಸಿರಲಿಲ್ಲ.
ಪಂಜಾಬ್ ಕಿಂಗ್ಸ್ ಮತ್ತು ಕೊಚ್ಚಿ ಟಸ್ಕರ್ಸ್ ಕೇರಳ ಪರ ಆಡಿದ ಶ್ರೀಶಾಂತ್ ಟಿ-20 ಲೀಗ್‌ನ 44 ಪಂದ್ಯಗಳಲ್ಲಿ ಒಟ್ಟು 40 ವಿಕೆಟ್ ಪಡೆದಿದ್ದಾರೆ. 2007 ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಶ್ರೀಶಾಂತ್ 10 ಪಂದ್ಯಗಳಲ್ಲಿ ಒಟ್ಟು 7 ವಿಕೆಟ್ ಪಡೆದಿದ್ದಾರೆ. ಅವರು 65 ಟಿ-20 ಪಂದ್ಯಗಳಲ್ಲಿ ಒಟ್ಟು 54 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೆ, 38 ವರ್ಷದ ಬೌಲರ್‌ಗೆ ಈ ವರ್ಷ ಕೇರಳ ತಂಡದ ಪರವಾಗಿ ರಣಜಿ ಟ್ರೋಫಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆದರೆ ಕೋವಿಡ್‌ನಿಂದಾಗಿ ಅದನ್ನು ಸದ್ಯಕ್ಕೆ ಮುಂದೂಡಲಾಗಿದೆ. ಈ ಬಾರಿಯ ರಣಜಿ ಆಯೋಜನೆಯಾದರೆ ಕೇರಳ ಪರ ಆಡುವುದನ್ನು ಕಾಣಬಹುದು.