ಮುಂಬರುವ 2026ರ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಶೂಟಿಂಗ್ ಮರಳಿ ಬರಲಿದೆ.ಕುಸ್ತಿಯನ್ನು ಕೈಬಿಡಲಾಗಿದೆ ಎಂದು ಕಾಮನ್ ವೆಲ್ತ್ ಗೇಮ್ಸ್ ಫೆಡರೇಶನ್ ಘೋಷಿಸಿದೆ.
ಶೂಟಿಂಗ್ ಹಲವಾರು ವರ್ಷಗಳಿಂದ ಭಾರತ ಕ್ರೀಡಾಕೂಡದ ಶಕ್ತಿಯಾಗಿದೆ. ಮೊನ್ನೆ ಜುಲೈ- ಆಗಸ್ಟ್ ನಲ್ಲಿ ನಡೆದ ಬರ್ಮಿಂಗ್ ಹ್ಯಾಮ್ ಕ್ರೀಡಾಕುಟದಲ್ಲಿ ಶೂಟಿಂಗ್ ಕೈಬಿಡಲಾಗಿತ್ತು.
ಇದೀಗ ಅಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿ ಮತ್ತು ಬಿಲ್ಲುಗಾರಿಕೆಯನ್ನು ಕೈಬಿಡಲು ನಿರ್ಧರಿಸಿದೆ.
ಈ ಪ್ರತಿಷ್ಠಿತ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತ ಈವರೆಗೂ 135 ಪದಕಗಳನ್ನು ಗೆದ್ದಿದೆ.63 ಚಿನ್ನ ಗೆದ್ದಿದೆ. ಅತಿ ಹೆಚ್ಚು ಪದಕಗಳನ್ನು ಭಾರತೀಯ ಅಥ್ಲೀಟ್ ಗಳು ಗೆದ್ದಿರುವುದು ಈ ವಿಭಾಗದಲ್ಲೆ. ಇನ್ನು ಕುಸ್ತಿಯಲ್ಲಿ ಈವರೆಗೂ 114 ಪದಕಗಳನ್ನು ಗೆದ್ದಿದೆ. ಇದರಲ್ಲಿ 49 ಚಿನ್ನ ಆಗಿದೆ.
2026ರ ಕ್ರೀಡಾಕೂಟದಲ್ಲಿ ಗಾಲ್ಫ್, ಬಿಎಂಎಕ್ಸ್ ಮತ್ತು ಕೋಸ್ಟಲ್ ರೊವಿಂಗ್ ಕ್ರೀಡೆಗಳಿಗೆ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ಕೋಸ್ಟಲ್ ರೋವಿಂಗ್ ಕ್ರೀಡೆಯನ್ನು 2028ರ ಲಾಸ್ ಆಂಜಲ್ಸ್ ಒಲಿಂಪಿಕ್ಸ್ ನಲ್ಲೂ ಅಳವಡಿಸಲಾಗಿದೆ.
2026ರ ಕ್ರೀಡಾಕೂಟ ವಿಕ್ಟೊರಿಯಾದಲ್ಲಿ ನಡೆಯಲಿದ್ದು 22 ಕ್ರೀಡೆ ಮತ್ತು 26 ವಿಭಾಗಳಲ್ಲಿ ನಡೆಯಲಿದೆ. 9 ವಿಭಾಗಗಳು ಪ್ಯಾರಾ ಕ್ರೀಡಾಕೂಟಗಳಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದೆ.
2026ರಲ್ಲಿ ನಡೆಯುವ ಕ್ರೀಡೆಗಳು
ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್: ಬ್ಯಾಡ್ಮಿಂಟನ್(3-3ಮತ್ತು 3-3ವ್ಹೀಲ್ ಚೇರ್)ಬಾಕ್ಸಿಂಗ್: ಬೀಚ್ ವಾಲಿಬಾಲ್: ಕೋಸ್ಟಲ್ ರೋವಿಂಗ್: ಟಿ20 ಕ್ರಿಕೆಟ್ (ಮಹಿಳಾ ವಿಭಾಗ): ಸೈಕ್ಲಿಂಗ್, (ಬಿಎಂಎಕ್ಸ್, ಮೌಂಟೇನ್ ಬೈಕ್, ರೋಡ್, ಪ್ಯಾರಾ ಟ್ರ್ಯಾಕ್):ಡೈವಿಂಗ್: ಗಾಲ್ಫ್: ಜಿಮ್ನಾಸ್ಟಿಕ್ಸ್:ಹಾಕಿ: ಲಾನ್ ಬೌಲ್ಸ್ ಮತ್ತು ಪ್ಯಾರಾ ಲಾನ್ ಬೌಲ್ಸ್:ನೆಟ್ ಬಾಲ್:ಪಾರಾ ಪವರ್ ಲಿಪ್ಟಿಂಗ್: ರಗ್ಬಿ ಸೆನ್ಸ್: ಶೂಟಿಂಗ್ಮತ್ತು ಪಾರಾ ಶೂಟಿಂಗ್: ಸ್ಕ್ವಾಶ್: ಟೇಬಲ್ ಟೆನಿಸ್ ಮತ್ತು ಪಾರಾ ಟೇಬಲ್ ಟೆನಿಸ್: ಥ್ರಿಲಿಟಾನ್ ಮತ್ತು ಪಾರಾ ಥ್ರಿಲಿಟಾನ್: ವೇಟ್ ಲೀಪ್ಟಿಂಗ್.