ಅಫ್ಘಾನಿಸ್ತಾನ (Afghanistan) ತಂಡದ ಟ್ರಂಪ್ ಕಾರ್ಡ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಅಂತರಾಷ್ಟ್ರೀಯ ಟಿ20ಯಲ್ಲಿ (T20I) ಹೊಸ ದಾಖಲೆ (New Record) ಬರೆದಿದ್ದಾರೆ. ಅತಿ ಕಡಿಮೆ ಪಂದ್ಯಗಳಲ್ಲಿ 115 ವಿಕೆಟ್ ಕಿತ್ತ ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ (Asia Cup) ಪಂದ್ಯದಲ್ಲಿ ರಶೀದ್ ಈ ರೆಕಾರ್ಡ್ ಮಾಡಿದ್ದಾರೆ. ಅಂತರಾಷ್ಟ್ರೀಯ ಟಿ20ಯಲ್ಲಿ ರಶೀದ್‌ಗೆ ಈ ಸಾಧನೆ ಮಾಡಲು ಕೇವಲ 68 ಪಂದ್ಯಗಳು ಮಾತ್ರ ಸಾಕಾಗಿವೆ. ರಶೀದ್ ಟಿಮ್ ಸೌಥಿಯ ದಾಖಲೆ ಮುರಿದು ಮುಂದಕ್ಕೆ ಹೋಗಿದ್ದಾರೆ.
ಟಾಪ್ ಬೌಲರ್ಸ್
* ಶಕೀಬ್ ಅಲ್ ಹಸನ್- 100 ಪಂದ್ಯ-122 ವಿಕೆಟ್
* ರಶೀದ್ ಖಾನ್- 68 ಪಂದ್ಯ-115 ವಿಕೆಟ್
* ಟಿಮ್ ಸೌಥಿ- 95 ಪಂದ್ಯ-114 ವಿಕೆಟ್
* ಲಸಿತ್ ಮಾಲಿಂಗ- 84 ಪಂದ್ಯ-107 ವಿಕೆಟ್
* ಈಶ್ ಸೋಧಿ- 76 ಪಂದ್ಯ-99 ವಿಕೆಟ್
ಅಂತರಾಷ್ಟ್ರೀಯ ಟಿ20ಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಹಿರಿಮೆ ಶಕಿಬ್ ಅಲ್ ಹಸನ್ (Shakib Al Hasan) ಹೆಸರಿನಲ್ಲಿದೆ. ಆದರೆ ಶಕೀಬ್ ವೃತ್ತಿ ಜೀವನದ ಅಂತಿಮ ಹಂತದಲ್ಲಿದ್ದಾರೆ. ಆದರೆ ರಶೀದ್ ಖಾನ್ ಇನ್ನೂ ಯುವಕ. ಅಷ್ಟೇ ಅಲ್ಲ ಈಗ ಹೆಚ್ಚು ಹೆಚ್ಚು ಟಿ20 ಪಂದ್ಯಗಳು ನಡೆಯುತ್ತಿವೆ. ಹೀಗಾಗಿ ರಶೀದ್ ಖಾನ್ ಸುಲಭವಾಗಿ ಈ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಬಲ್ಲರು.
ಟೀಮ್ ಇಂಡಿಯಾ ಹೆಚ್ಚು ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಅಡಿದ್ದರೂ ಯಾವ ಬೌಲರ್ ಕೂಡ ಟಾಪ್ 5ನಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಭಾರತ ತಂಡದಲ್ಲಿ ಆಗುತ್ತಿರುವ ಬದಲಾವಣೆಗಳಾಗಿವೆ. ಹೆಚ್ಚು ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕರೆ ಬೌಲರ್‌ಗಳಿಗೆ ಹೆಚ್ಚು ವಿಕೆಟ್‌ಗಳು ಸಿಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಬೌಲರ್‌ಗಳ ಬದಲಾವಣೆ ವಿಕೆಟ್ ಬೇಟೆಯ ಮೇಲೆ ಪರಿಣಾ ಮ ಬೀರಿದೆ.
ಟೀಮ್ ಇಂಡಿಯಾ ಬೌಲರ್‌ಗಳ ಸಾಧನೆ
* ಯಜುವೇಂದ್ರ ಚಹಲ್- 63 ಪಂದ್ಯ-79 ವಿಕೆಟ್
* ಭುವನೇಶ್ವರ್ ಕುಮಾರ್- 73 ಪಂದ್ಯ-77 ವಿಕೆಟ್
* ಜಸ್‌ಪ್ರಿತ್ ಬುಮ್ರಾ -58 ಪಂದ್ಯ-69 ವಿಕೆಟ್
* ರವಿಚಂದ್ರನ್ ಅಶ್ವಿನ್- 54 ಪಂದ್ಯ-64 ವಿಕೆಟ್
* ಹಾರ್ದಿಕ್ ಪಾಂಡ್ಯಾ- 58 ಪಂದ್ಯ-63 ವಿಕೆಟ್
ಟೀಮ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ರೊಟೇಷನ್ ಪದ್ಧತಿಯಂತೆ ಬೌಲರ್‌ಗಳನ್ನು ಆಡಿಸುತ್ತಿದೆ. ಇದು ಬೌಲರ್‌ಗಳು ಗಾಯಗೊಳ್ಳುವುದನ್ನು ತಪ್ಪಿಸುತ್ತಿದೆ. ದಾಖಲೆಗಳಿಗಿಂತ ಆಟಗಾರರು ಫಿಟ್ ಆಗಿರುವುದೇ ಬೆಸ್ಟ್ ಎಂದು ಬಿಸಿಸಿಐ ಯೋಚಿಸಿದೆ. ಒಟ್ಟಿನಲ್ಲಿ ಟಿ20 ದಾಖಲೆಗಳಲ್ಲಿ ಸ್ಪಿನ್ನರ್‌ಗಳಷ್ಟೇ ವೇಗದ ಬೌಲರ್‌ಗಳು ಕೂಡ ಹೆಸರು ಬರೆಸಿಕೊಳ್ಳುತ್ತಿದ್ದಾರೆ.