ಟೀಮ್ ಇಂಡಿಯಾದ ಟೆಸ್ಟ್ ತಂಡ ಪ್ರಕಟವಾಗಿದೆ. ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನಲ್ಲಿ ಒಂದು ಟೆಸ್ಟ್ ಭಾರತ ಆಡಲಿದೆ. ಶ್ರೀಲಂಕಾ ವಿರುದ್ಧದ ಸರಣಿಯಿಂದ ತಂಡದಿಂದ ಹೊರಗಿದ್ದ ಚೇತೇಶ್ವರ ಪೂಜಾರಾ ರಿ ಎಂಟ್ರಿ ಅಗಿದೆ. ಆದರೆ ಅಜಿಂಕ್ಯಾ ರಹಾನೆಗೆ ಮಾತ್ರ ಟೆಸ್ಟ್ ತಂಡದಲ್ಲಿ ಸ್ಥಾನವಿಲ್ಲ.
ಕೌಂಟಿಯಲ್ಲಿ ಪೂಜಾರಾ ಕಮಾಲ್..!
ರಹಾನೆ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಆದರೆ ಪೂಜಾರಾ ಅನ್ ಸೋಲ್ಡ್ ಆದ ಕಾರಣ ಐಪಿಎಲ್ನಲ್ಲಿ ಇರಲಿಲ್ಲ. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡ ಪೂಜಾರಾ ಕೌಂಟಿ ಆಡಲು ಮನಸ್ಸು ಮಾಡಿದರು. ಕೌಂಟಿಯಲ್ಲಿ ಪೂಜಾರಾ ದ್ವಿಶತಕ, ಶತಕಗಳ ಮೂಲಕ ರನ್ ಬೇಟೆಯಾಡಿದರು. ತನ್ನಲಿ ಇನ್ನೂ ಶಕ್ತಿ ಇದೆ ಅನ್ನುವುದನ್ನು ತೋರಿಸಿಕೊಟ್ಟರು.
ಇಂಗ್ಲೆಂಡ್ ನೆಲದ ಅನುಭವ ಇರುವ ಆಟಗಾರರ ಕಡೆ ಆಯ್ಕೆ ಸಮಿತಿಯ ಕಣ್ಣಿತ್ತು. ಪೂಜಾರಾ ಆಟಕ್ಕೆ ಬೆಲೆ ಕೊಟ್ಟು ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. 95 ಟೆಸ್ಟ್ ಪಂದ್ಯಗಳ ಪೂಜಾರಾ 100 ಟೆಸ್ಟ್ ಆಡುವ ಕನಸಲ್ಲಿದ್ದಾರೆ. ಇದು ನನಸಾಗಬಹುದು.
ಮತ್ತೊಂದೆಡೆ ರಹಾನೆ ಐಪಿಎಲ್ನಲ್ಲಿ ಅಷ್ಟಾಗಿ ಮಿಂಚಲಿಲ್ಲ. ಅಷ್ಟೇ ಅಲ್ಲದೆ ಗಾಯಗೊಂಡು ತಂಡದಿಂದ ಕೂಡ ಹೊರಬಿದ್ದರು. ಈಗ ಟೆಸ್ಟ್ ತಂಡದಲ್ಲೂ ಜಾಗ ಪಡೆದಿಲ್ಲ. ಮುಂದಿನ ದಿನಗಳಲ್ಲಿ ರಹಾನೆ ಕಂ ಬ್ಯಾಕ್ ಮಾಡಬಹುದಾದರೂ ಅದಕ್ಕೆ ಸಾಕಷ್ಟು ಶ್ರಮಪಡಬೇಕಿದೆ. ಫುಜಾರಾ ಸಿಕ್ಕ ಅವಕಾಶಗಳನ್ನು ಬಳಸಿಕೊಂಡರೆ ಶತಕದ ಟೆಸ್ಟ್ ಆಡಬಹುದು.