Cheteshwar Pujara – ಟೀಮ್ ಇಂಡಿಯಾದ ಹೊಸ ಲೆಗ್ ಸ್ಪಿನ್ನರ್ ?

ಇಂಗ್ಲೀಷ್ ಕೌಂಟಿ ಕ್ರಿಕೆಟ್ ನಲ್ಲಿ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಟೀಮ್ ಇಂಡಿಯಾದ ಟೆಸ್ಟ್ ತಂಡಕ್ಕೆ ಹೆಚ್ಚುವರಿ ಲೆಗ್ ಸ್ಪಿನ್ನರ್ ಸಿಕ್ಕಂತಾಗಿದೆ.
ಅರೇ ಅಚ್ಚರಿ ಪಡಬೇಡಿ. ಯಾರು ಈ ಹೊಸ ಸ್ಪಿನ್ನರ್ ಅಂತ. ನಿಮಗೆಲ್ಲಾ ಗೊತ್ತು ಬಿಡಿ. ಚೇತೇಶ್ವರ ಪೂಜಾರ ಹೆಸರು ಕೇಳಿಯೇ ಕೇಳಿರುತ್ತೀರಿ. ಟೀಮ್ ಇಂಡಿಯಾ ಟೆಸ್ಟ್ ಸ್ಪೇಷಲಿಸ್ಟ್ ಚೇತೇಶ್ವರ ಪೂಜಾರ. ಎದುರಾಳಿ ಬೌಲರ್ ಗಳನ್ನು ಕಾಡುವ ರೀತಿಯೇ ಅದ್ಭುತವಾಗಿರುತ್ತದೆ. ನಿಧಾನಗತಿಯ ಆಟವನ್ನಾಡಿ ನಂತರ ತಂಡಕ್ಕೆ ಭದ್ರ ಬುನಾದಿ ಹಾಕುವುದರಲ್ಲಿ ಚೇತೇಶ್ವರ ಪೂಜಾರ ಪರಿಣತ.
ಟೆಸ್ಟ್ ಕ್ರಿಕೆಟ್ ನಲ್ಲಿ ಚೇತೇಶ್ವರ ಪೂಜಾರ ಅವರ ಸಮಯೋಚಿತ ಆಟದಿಂದ ಹಲವು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ ಎಂಬುದನ್ನು ಮರೆಯುವ ಹಾಗಿಲ್ಲ.
ಕಳೆದ ಒಂದೆರಡು ವರ್ಷಗಳಿಂದ ಪೂಜಾರ ಬ್ಯಾಟ್ ನಿಂದ ನಿರೀಕ್ಷಿತ ರನ್ ಗಳು ಹರಿದು ಬಂದಿಲ್ಲ. ಆದ್ರೂ ತಾಳ್ಮೆಯ ಆಟವನ್ನಾಡಿ ತಂಡವನ್ನು ಪಾರು ಮಾಡುವ ಸಾಮಥ್ರ್ಯವಂತೂ ಇದೆ.

ಹೌದು, ಇತ್ತೀಚೆಗೆ ಇಂಗ್ಲೆಂಡ್ ವಿರುದ್ದ ನಡೆದಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಪೂಜಾರ ಅರ್ಧಶತಕ ದಾಖಲಿಸಿ ಗಮನ ಸೆಳೆದಿದ್ದರು. ಆದ್ರೂ ಪೂಜಾರ ನೈಜ ಆಟವನ್ನಾಡಲು ವಿಫಲರಾದ್ರು.
ಇದೀಗ ಚೇತೇಶ್ವರ ಪೂಜಾರ ಅವರು ಇಂಗ್ಲೆಂಡ್ ಕೌಂಟಿ ತಂಡದಲ್ಲಿ ಆಡುತ್ತಿದ್ದಾರೆ. ಸಸೆಕ್ಸ್ ತಂಡದ ಪರ ಆಡುತ್ತಿರುವ ಪೂಜಾರ ಲೆಗ್ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದ್ರು. ಪಂದ್ಯದ ಮೂರನೇ ದಿನ ಹಾಗೇ ಸುಮ್ಮನೆ ಬೌಲಿಂಗ್ ಮಾಡಿದ್ದ ಪೂಜಾರ ಒಂದು ಓವರ್ ನಲ್ಲಿ ಎಂಟು ರನ್ ನೀಡಿದ್ದರು. ಆದ್ರೆ ವಿಕೆಟ್ ಪಡೆದುಕೊಂಡಿಲ್ಲ.
ಹಾಗಂತ ಚೇತೇಶ್ವರ ಪೂಜಾರ ಬೌಲಿಂಗ್ ಮಾಡುತ್ತಿರುವುದು ಇದೇನೂ ಹೊಸತಲ್ಲ. ಈ ಹಿಂದೆ ಟೀಮ್ ಇಂಡಿಯಾ ಪರ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದರು. ಆದ್ರೆ ವಿಕೆಟ್ ಪಡೆದಿಲ್ಲ. ಈ ನಡುವೆ, ದೇಶಿ ಕ್ರಿಕೆಟ್ ನಲ್ಲಿ 41.5 ಓವರ್ ಗಳನ್ನು ಬೌಲಿಂಗ್ ಮಾಡಿ ಆರು ವಿಕೆಟ್ ಉರುಳಿಸಿದ್ದರು.
ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೆ ಮುನ್ನ ಎರಡು ದ್ವಿಶತ ಮತ್ತು ಎರಡು ಶತಕಗಳನ್ನು ಸಿಡಿಸಿದ್ದರು.