ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಆವೃತ್ತಿಯಲ್ಲಿ ಪ್ಲೇ-ಆಫ್ ರೇಸ್‌ನಿಂದ ಹೊರಗುಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ ಭಾನುವಾರ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಅಗ್ರ ಸ್ಥಾನೀಯ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ.
ಒಂದೆಡೆ, ಚೆನ್ನೈ ಗೌರವವನ್ನು ಉಳಿಸಿಕೊಳ್ಳಲು ಕಣಕ್ಕೆ ಇಳಿಯಲಿದೆ. ಗುಜರಾತ್ 20 ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನದಲ್ಲಿ ಉಳಿಯುವ ಗುರಿಯನ್ನು ಹೊಂದಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಈ ಪಂದ್ಯ ರೋಚಕತೆ ಹೆಚ್ಚಿಸಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಅಭಿಮಾನಿಗಳ ಗಮನ ಸೆಳೆದಿದೆ.

ಚೆನ್ನೈ ಪರ ಇನ್ನಿಂಗ್ಸ್ ಆರಂಭಿಸುವ ಋತುರಾಜ್ ಗಾಯಕ್ವಾಡ್ ಹಾಗೂ ಡಾನ್ವೆ ಕಾನ್ವೆ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಮಧ್ಯಮ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ, ಶಿವಂ ದುಬೆ, ಅಂಬಟಿ ರಾಯುಡು ದೊಡ್ಡ ಇನ್ನಿಂಗ್ಸ್ ಆಡಬೇಕಿದೆ. ಕಳೆದ ಪಂದ್ಯದಲ್ಲಿ ಆಡಿದ ರೀತಿ ಧೋನಿ ಸ್ಥಿರ ಪ್ರದರ್ಶನ ನೀಡಬೇಕಿದೆ. ಬೌಲಿಂಗ್ ನಲ್ಲಿ ಮುಖೇಶ್ ಚೌಧರಿ, ಡ್ವೇನ್ ಬ್ರಾವೊ, ಮೋಯಿನ್ ಅಲಿ ಬಿಗುವಿನ ದಾಳಿ ನಡೆಸಬೇಕಿದೆ.

ಹಾರ್ದಿಕ್ ಪಾಂಡ್ಯ ಮುಂದಾಳತ್ವದ ತಂಡ ಉತ್ತಮವಾಗಿದೆ. ತಂಡದ ಬ್ಯಾಟಿಂಗ್ ವಿಭಾಗಕ್ಕೆ ಶುಭ್‌ಮನ್ ಗಿಲ್, ಡೇವಿಡ್ ಮಿಲ್ಲರ್, ರಾಹುಲ್ ತೆವಟಿಯಾ, ವೃದ್ಧಿಮನ್ ಸಹಾ, ಹಾರ್ದಿಕ್ ಪಾಂಡ್ಯ ಆಧಾರ. ಇವರು ಪರಿಸ್ಥಿತಿಗೆ ತಕ್ಕನಾದ ಆಟವನ್ನು ಆಡಬಲ್ಲರು. ಬೌಲಿಂಗ್ ವಿಭಾಗದಲ್ಲಿ ಲಾಕಿ ಫಾರ್ಗ್ಯುಸನ್, ಮೊಹಮ್ಮದ್ ಶಮಿ, ಪ್ರದೀಪ್ ಸಾಂಗ್ವಾನ್ ಶಿಸ್ತು ಬದ್ಧ ದಾಳಿ ಸಂಘಟಿಸಬೇಕಿದೆ. ಸ್ಪಿನ್ ಬೌಲರ್ ರಶೀದ್ ಖಾನ್ ಮೋಡಿ ನಡೆದರೆ ಗೆಲುವು ನಿಶ್ಚಿತ.