ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಸ್ಟಾರ್ ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಈ ಪಟ್ಟಿಯಲ್ಲಿ ಮೊದಲಿಗರಾಗಿ ಕಾಣಿಸಿಕೊಳ್ಳುವುದು ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಸಹ ಇದ್ದಾರೆ. ಹಲವು ವರ್ಷಗಳಿಂದ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದ ರೈನಾ, ಅವರನ್ನು ಖರೀದಿಸುವಲ್ಲಿ ಚೆನ್ನೈ ವಿಫಲವಾಗಿದೆ. ಚೆನ್ನೈ ತಂಡಕ್ಕೆ ಇವರನ್ನು ಏಕೆ ಸೇರಿಸಿಕೊಳ್ಳಲಿಲ್ಲ ಎಂದು ತಂಡದ ಸಿಇಒ ಕಾಶಿ ವಿಶ್ವನಾಥ್ ಹೇಳಿದ್ದಾರೆ.
ಚೆನ್ನೈನ ಯೂಟ್ಯೂಬ್ ಚಾನೆಲ್ ನಲ್ಲಿ ಕಾಶಿ ವಿಶ್ವನಾಥ್ ಮಾತನಾಡಿ, ‘ಕಳೆದ 12 ವರ್ಷಗಳಿಂದ ಚೆನ್ನೈ ಪರ ಸ್ಥಿರ ಪ್ರದರ್ಶನ ನೀಡಿದ ಆಟಗಾರರಲ್ಲಿ ರೈನಾ ಕೂಡ ಒಬ್ಬರು. ರೈನಾ ಅನುಪಸ್ಥಿತಿಯು ನಮಗೆ ತುಂಬಾ ಕಷ್ಟಕರವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ, ನಾವು ನಮ್ಮ ತಂಡದ ಸಂಯೋಜನೆಯನ್ನು ನೋಡಿದ್ದೇವೆ. ಸದ್ಯದ ಚೆನ್ನೈ ತಂಡದಲ್ಲಿ ರೈನಾ ಹೊಂದಿಕೊಳ್ಳುವುದಿಲ್ಲ ಎಂದು ನಾವು ಭಾವಿಸಿದ್ದೇವೆ” ಎಂದಿದ್ದಾರೆ.
ನಮ್ಮ ತಂಡ ರೈನಾ ಮತ್ತು ಫಾಫ್ ಡು ಪ್ಲೆಸಿಸ್ ಅವರನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಕಾಶಿ ವಿಶ್ವನಾಥ್ ಹೇಳಿದ್ದಾರೆ. ನಾವು ಅವರನ್ನು ಕಳೆದುಕೊಳ್ಳುತ್ತೇವೆ. ಫಾಫ್ ಕಳೆದ ಒಂದು ದಶಕದಿಂದ ನಮ್ಮೊಂದಿಗಿದ್ದರು, ಆದರೆ ಅದು ಹರಾಜಿನ ಪ್ರಕ್ರಿಯೆಯಾಗಿದೆ” ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಆಟಗಾರ ಇರ್ಫಾನ್ ಪಠಾಣ್ ಸುರೇಶ್ ರೈನಾಗೆ ಟ್ವೀಟ್ ಮಾಡಿ ರೈನಾ ಅವರನ್ನು ತಂಡಗಳು ಖರೀದಿಸಬಹುದಿತ್ತು ಎಂದು ನಾನು ಇನ್ನೂ ಭಾವಿಸುತ್ತೇನೆ, 40 ವರ್ಷದವರೆಗೆ ಐಪಿಎಲ್ ಆಡಿದ ಕೆಲವು ವಿದೇಶಿ ಆಟಗಾರರನ್ನು ನಾವು ನೋಡಿದ್ದೇವೆ ಎಂದಿದ್ದಾರೆ.