ಚೆನ್ನೈ ಸೂಪರ್ ಕಿಂಗ್ಸ್ ಸಾಮಾನ್ಯವಾಗಿ ಕಾಂಬಿನೇಷನ್ ಬದಲಿಸುವ ತಂಡವಲ್ಲ. ಅತೀ ಕಡಿಮೆ ಆಟಗಾರರಿಂದ ಉತ್ತಮ ರಿಸಲ್ಟ್ ಪಡೆಯುವುದು ಈ ತಂಡದ ರಣತಂತ್ರಗಳಲ್ಲಿ ಒಂದು. ಆದರೆ ಈ ಬಾರಿಯ ಐಪಿಎಲ್ನ 2ನೇ ಪಂದ್ಯದಲ್ಲೇ ಸಿಎಸ್ಕೆ ದೊಡ್ಡ ಬದಲಾವಣೆಗೆ ಕೈ ಹಾಕಬೇಕಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 3 ಸ್ಥಾನಗಳು ಅದಲು ಬದಲಾಗುವ ಸಾಧ್ಯತೆ ಇದೆ.
ಫಾರಿಕೋಟಾ ಬದಲಾವಣೆ ಏನು..?
ಮೊಯಿನ್ ಅಲಿ ತಂಡಕ್ಕೆ ಎಂಟ್ರಿ ಆಗಿರುವುದರಿಂದ ಡೆವೊನ್ ಕಾನ್ವೆ ನೇರವಾಗಿ ತಂಡದಿಂದ ಹೊರಗುಳಿಯಲಿದ್ದಾರೆ. ಇದರಿಂದ ಫಾರಿನ್ ಕೋಟಾದಲ್ಲಿ ಆಲ್ರೌಂಡರ್ ಸಿಕ್ಕಹಾಗಾಗುತ್ತದೆ. ಮೊಯಿನ್ ಬ್ಯಾಟಿಂಗ್ ಓಪನ್ ಮಾಡುವ ಜೊತೆಗೆ ಬೌಲಿಂಗ್ ಕೂಡ ಮಾಡುತ್ತಾರೆ.
ಮಿಚೆಲ್ ಸ್ಯಾಂಟ್ನರ್ ಎಡಗೈ ಸ್ಪಿನ್ನರ್ ಆಗಿರುವುದರಿಂದ ಅವರ ಸ್ಥಾನವೂ ಹೋಗಬಹುದು. ನಾಯಕ ಜಡೇಜಾ ಮತ್ತು ಸ್ಯಾಂಟ್ನರ್ ಒಂದೇ ರೀತಿಯ ಬೌಲರ್ಗಳಾಗಿರುವುದರಿಂದ ಒಟ್ಟಿಗೆ ಆಡುವುದು ಕಷ್ಟ. ಸ್ಯಾಂಟ್ನರ್ ಜಾಗದಲ್ಲಿ ಡ್ವೈನ್ ಪ್ರಿಟೋರಿಯಸ್್ ಆಡಬಹುದು.
ದುಬೆಗೆ ಕೋಕ್, ರಾಜ್ವರ್ಧನ್ಗೆ ಸ್ಥಾನ..?
ಶಿವಂ ದುಬೆ ಸಿಎಸ್ಕೆ ತಂಡಕ್ಕೆ ಭಾರವಾಗುತ್ತಿದ್ದಾರೆ. ಅತ್ತ ಬೌಲರ್ ಕೂಡ ಅಲ್ಲ, ಇತ್ತ ಬ್ಯಾಟ್ಸ್ಮನ್ ಕೂಡ ಅಲ್ಲ ಅನ್ನುವ ಹಾಗಿದ್ದಾರೆ. ಒಂದು ರೀತಿಯಲ್ಲಿ ಆಟವಾಡದ ಆಟಗಾರ ಅನ್ನುವ ಹಾಗಿದ್ದಾರೆ. ಹೀಗಾಗಿ ಇವರ ಜಾಗಕ್ಕೆ ಅಂಡರ್ 19 ತಂಡದಲ್ಲಿ ಮಿಂಚಿದ ಆಲ್ರೌಂಡರ್ ರಾಜ್ವರ್ಧನ್ ಹಂಗೇರ್ಕರ್ ಆಕ್ರಮಿಸಿಕೊಳ್ಳಬಹುದು.
ರಾಜ್ವರ್ಧನ್ ವೇಗದ ಬೌಲಿಂಗ್ ಜೊತೆಗೆ ಬಿಗ್ ಹಿಟ್ ಮಾಡಬಲ್ಲ ಕೆಪಾಸಿಟಿ ಹೊಂದಿದ್ದಾರೆ. ಹೀಗಾಗಿ ಸಿಎಸ್ಕೆ ಈ ಬದಲಾವಣೆಗೆ ಕೈ ಹಾಕಬಹುದು.
ಚೆನ್ನೈ ತಂಡ ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತಿತ್ತು. ಈಗ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡುವುದಕ್ಕೂ ಮುನ್ನ ಕಾಂಬಿನೇಷನ್ ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.