ಇದು ಮಹಿಳಾ ವಿಶ್ವಕಪ್ನಲ್ಲಿ ಅಜೇಯ ತಂಡಗಳ ನಡುವಿನ ಹೋರಾಟವಾಗಿತ್ತು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಲಿಷ್ಠರ ಹೋರಾಟದಲ್ಲಿ ಗೆಲ್ಲುವವರು ಯಾರು ಅನ್ನುವುದು ಕುತೂಹಲ ಕೆರಳಿಸಿತ್ತು. ಆದರೆ ಆಸ್ಟ್ರೇಲಿಯಾ ಅಜೇಯ ಓಟ ಮುಂದುವರೆಸಿದೆ. ನಾಯಕಿ ಮೆಗ್ ಲ್ಯಾನಿಂಗ್ ಸಿಡಿಸಿದ ಅಜೇಯ 135 ರನ್ಗಳ ಇನ್ನಿಂಗ್ಸ್ ಕಾಂಗರುಗಳಿಗೆ ಭರ್ಜರಿ ಜಯ ತಂದುಕೊಟ್ಟಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಲಿಝೆಲ್ ಲಿ ಮತ್ತು ಲಾರಾ ವೊಲ್ವಾರ್ಡ್ 88 ರನ್ಗಳ ಭರ್ಜರಿ ಆರಂಭ ತಂದುಕೊಟ್ಟರು. ಲಿಝಿಲ್ ಲಿ 4 ಎಸೆತಗಳಲ್ಲಿ 36 ರನ್ಗಳಿಸಿ ನಿರ್ಗಮಿಸಿದರು. ಲಾರಾ ಗೂಡಾಲ್ 15 ರನ್ಗಳಿಸಲಷ್ಟೇ ಶಕ್ತರಾದರು. ವೊಲ್ವಾರ್ಡ್ ಮತ್ತು ನಾಯಕಿ ಸುನ್ ಲಸ್ ನಡುವೆ 91 ರನ್ಗಳ ಜೊತೆಯಾಟ ಬಂತು.
ವಿಕೆಟ್ಗಾಗಿ ಪರದಾಡುತ್ತಿದ್ದ ಆಸ್ಟ್ರೇಲಿಯಾಕ್ಕೆ ಆ್ಯಶ್ಲೆ ಗಾರ್ಡನರ್ ಬ್ರೇಕ್ ತಂದು ಕೊಟ್ಟರು. 134 ಎಸೆತಗಳಲ್ಲಿ 90 ರನ್ಗಳಿಸಿದ್ದ ವೊಲ್ವಾರ್ಡ್ ಔಟಾಗಿ ಶತಕ ವಂಚಿತರಾದರು. ಸುನ್ ಲಸ್ ಆಟ 52 ರನ್ಗಳಿಗೆ ಅಂತ್ಯವಾಯಿತು. ಮಿಗ್ನನು ಡು ಪ್ರಿಝ್ 14 ರನ್ಗಳಿಸಿ ವಿಕೆ್ಟ್ ಒಪ್ಪಿಸಿದರು. ಸ್ಲಾಗ್ ಓವರುಗಳಲ್ಲಿ ಮರಿಝಾನ್ ಕಾಪ್ 21 ಎಸೆತಗಳಲ್ಲಿ ಅಜೇಯ 30 ರನ್ಗಳಿಸಿದರೆ. ಚೋಲ್ ಟೈರಾನ್ 9 ಎಸೆತಗಳಲ್ಲಿ 17 ರನ್ಗಳಿಸಿ ಮಿಂಚಿದರು. 50 ಓವರುಗಳಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್ ಕಳೆದುಕೊಂಡು 271 ರನ್ಗಳಿಸಿತು.
ಕಠಿಣ ಚೇಸಿಂಗ್ಗೆ ಹೊರಟ ಆಸ್ಟ್ರೇಲಿಯಾ 1 ರನ್ಗಳಿಸಿದ ಅಲಿಸಾ ಹೀಲಿ ವಿಕೆಟ್ ಕಳೆದುಕೊಂಡಿತು. ಕ್ರೀಸ್ಗಿಳಿದ ನಾಯಕಿ ಮೆಗ್ ಲ್ಯಾನಿಂಗ್, ರಾಶೆಲ್ ಹೇಯ್ನ್ಸ್ ವೇಗದ ಆಟ ಆಡಿದರು. ಹೇಯ್ನ್ಸ್ 17 ರನ್ಗಳಿಸಿ ನಿರ್ಗಮಿಸಿದರು. ಲ್ಯಾನಿಂಗ್ ಮತ್ತು ಬೆಥ್ ಮೂನಿ 3ನೇ ವಿಕೆಟ್ಗೆ 60 ರನ್ಗಳ ಜೊತೆಯಾಟ ಆಡಿದರು. ಮೂನಿ 21 ರನ್ಗಳಿಸಿ ನಿರ್ಗಮಿಸಿದರು.
ಮೆಗ್ ಲ್ಯಾನಿಂಗ್ ಆಟ ನಿರಾಂತಕವಾಗಿ ಸಾಗಿತು. ತಾಹಿಲಾ ಮೆಕ್ಗ್ರಾಥ್ ಜೊತೆ 93 ರನ್ಗಳ ಜೊತೆಯಾಟ ಕಟ್ಟಿದರು. ಅಷ್ಟೇ ಅಲ್ಲ ಲ್ಯಾನಿಂಗ್ ಶತಕದ ಸಂಭ್ರಮ ಕೂಡ ಆಚರಿಸಿಕೊಂಡರು. ತಾಹಿಲಾ 32 ರನ್ಗಳಿಸಿ ನಿರ್ಗಮಿಸಿದರು. ಆ್ಯಶ್ಲೆ ಗಾರ್ಡನರ್ ಬಿರುಸಿನ 22 ರನ್ಗಳಿಸಿ ಮಿಂಚಿದರು. ಆದರೆ ಮೆಗ್ ಲ್ಯಾನಿಂಗ್ ಅಜೇಯ 135 ರನ್ಗಳಿಸಿ ಗೆಲುವಿನ ರೂವಾರಿ ಯಾದರು. ಇವರಿಗೆ ಅನ್ನಬೆಲ್ ಸದರ್ಲೆಂಡ್ ಅಜೇಯ 22 ರನ್ಗಳಿಸಿ ಸಾಥ್ ನೀಡಿದರು. ಆಸ್ಟ್ರೇಲಿಯಾ 45.2 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಆಸ್ಟ್ರೇಲಿಯಾ ಆಡಿರುವ 6 ಪಂದ್ಯಗಳ ಪೈಕಿ 6 ನ್ನೂ ಗೆದ್ದರೆ, ದಕ್ಷಿಣ ಆಫ್ರಿಕಾ 6 ಪಂದ್ಯಗಳಲ್ಲಿ 5ನ್ನು ಗೆದ್ದು 10 ಅಂಕ ಗಳಿಸಿದೆ.