ಫಿಫಾ ವಿಶ್ವಕಪ್ನಲ್ಲಿ ಅಚ್ಚರಿ ಫಲಿತಾಂಶಗಳು ಹೊರಬರುತ್ತಲೇ ಇವೆ. ಎರಡನೆ ರಾಂಕ್ ತಂಡ ಬೆಲ್ಜಿಯಂ ಅನ್ನು ಮೊರೊಕ್ಕೊ 2-0 ಗೋಲುಗಳಿಂದ ಸೋಲಿಸಿದೆ.
ಅಲ್ ತುಮಾಮಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಅವಯಲ್ಲಿ ಗೋಲಯ ದಾಖಲಾಗಲಿಲ್ಲ. ಸಬಿರಿ (73ನೇ ನಿಮಿಷ)ಅಬೊಖಲಲ್ (90 +2 ನಿಮಿಷ)ಗಳಲ್ಲಿ ಗೋಲು ಹೊಡೆದರು.
ಬೆಲ್ಜಿಯಂ ತಂಡ ಒಂದೇ ಒಂದು ಗೋಲು ಹೊಡೆಯದೇ ನಿರಾಸೆ ಅನುಭವಿಸಿತು. ಮೊರೊಕ್ಕೊ ತಂಡಕ್ಕೆ ಇದು ದೊಡ್ಡ ಗೆಲುವಾಗಿದೆ. ಕಳೆದ 3 ವಿಶ್ವಕಪ್ಗಳಲ್ಲಿ ಬೆಲ್ಜಿಯಂ ಸೋತಿರಲಿಲ್ಲ. ಬೆಲ್ಜಿಯಂ ತಂಡ ಕ್ರೋವೇಷಿಯಾ ವಿರುದ್ಧ ಗೆಲ್ಲಬೇಕಿದೆ.
ಜಪಾನ್ಗೆ ಕೋಸ್ಟರಿಕಾ ಶಾಕ್
ಇ ಗುಂಪಿನ ಪಂದ್ಯದಲ್ಲಿ ಕೋಸ್ಟರಿಕಾ ತಂಡ ಜಪಾನ್ ತಂಡಕ್ಕೆ ಸೋಲಿನ ಆಘಾತ ನೀಡಿದೆ. ಈ ಸೋಲಿನೊಂದಿಗೆ ಜಪಾನ್ ನಾಕೌಟ್ ಹಂತ್ಕಕೆ ಹೋಗಲು ಕಾಯಬೇಕಿದೆ.
ಮೊದಲ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ್ದ ಜಪಾನ್ ಎರಡನೆ ಪಂದ್ಯದಲ್ಲಿ ಸೋಲು ಕಂಡಿತು. ಮೊದಲ ಅವಯಲ್ಲಿ ಜಪಾನ್ಗೆ ಗೋಲು ಹೊಡೆಯುವ ಅವಕಾಶವಿತ್ತು.
ಆದರೆ ಒತ್ತಡದಲ್ಲಿ ಆಡಿದ್ದರಿಂದ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ. ಎರಡನೆ ಅವಧಿಯಲ್ಲೂ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದವು.
81ನೇ ನಿಮಿಷದಲ್ಲಿ ಫುಲ್ಲರ್ ಗೋಲು ಹೊಡೆದು ಜಪಾನ್ಗೆ ಶಾಕ್ ಕೊಟ್ಟರು.ಕೊನೆಯ ನಿಮಿಷಗಳಲ್ಲಿ ಜಪಾನ್ ನಿರಾಸೆ ಅನುಭವಿಸಿತು.