BWF World Tour Rankings- ಎಚ್.ಎಸ್. ಪ್ರಣೋಯ್…. ನಂಬರ್ ವನ್ ಆಟಗಾರ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಎಚ್. ಎಸ್. ಪ್ರಣೋಯ್ ಅವರ ಹೆಸರಿಗೆ ಮತ್ತೊಂದು ಗರಿ ಸೇರಿಕೊಂಡಿದೆ.
ಬಿಡಬ್ಲ್ಯುಎಫ್ ವಲ್ರ್ಡ್ ಟೂರ್ ಶ್ರೇಯಾಂಕ ಪಟ್ಟಿಯಲ್ಲಿ ಎಚ್. ಎಸ್. ಪ್ರಣೋಯ್ ಅವರು ನಂಬರ್ ವನ್ ಸ್ಥಾನನ್ನು ಪಡೆದುಕೊಂಡಿದ್ದಾರೆ.
ಇದು ಜಸ್ಟ್ ಟ್ರೈಲರ್. ಪಿಚ್ಚರ್ ಅಭಿ ಬಾಕಿ ಹೇ ಎಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದೆ.
ಎಚ್. ಎಸ್. ಪ್ರಣೋಯ್ ಅವರು 2022ರಲ್ಲಿ ಅದ್ಭುತವಾದ ಆಟವನ್ನೇ ಆಡಿದ್ದರು. ಜನವರಿಯಲ್ಲಿ ನಡೆದಿದ್ದ ಇಂಡಿಯನ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಹಾಗೇ ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಟೂರ್ನಿಯಲ್ಲೂ ಕ್ವಾರ್ಟರ್ ಫೈನಲ್ ತಲುಪಿದ್ದರು.
ಮಾರ್ಚ್ ನಲ್ಲಿ ಜರ್ಮನ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್, ಆಲ್ ಇಂಗ್ಲೆಂಡ್ ಚಾಂಪಿಯನ್ ಷಿಪ್ ನಲ್ಲಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದರು. ಬಳಿಕ ಸ್ವೀಸ್ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದರು. ಆದ್ರೆ ಕೊರಿಯಾ ಓಪನ್ ಮತ್ತು ಥಾಯ್ಲೆಂಡ್ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.
ಇನ್ನುಇಂಡೊನೇಶಿಯಾ ಓಪನ್ ನಲ್ಲಿ ಸೆಮಿಫೈನಲ್ ಹಾಗೂ ಮಲೇಶಿಯಾ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ಹಾಗೂ ಮಲೇಶಿಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿಫೈನಲ್ ಮತ್ತು ಸಿಂಗಾಪುರ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ಹಾಗೂ ಜಪಾನ್ ಓಪನ್ ನಲ್ಲೂ ಕ್ವಾರ್ಟರ್ ಫೈನಲ್ ಪ್ರವೇಸಿಸಿದ್ದರು.