ಎರಡು ಬಾರಿ ಒಲಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಬ್ಯಾಡ್ಮಿಂಟನ್ ವಿಶ್ವ ರಾಂಕಿಂಗ್ನಲ್ಲಿ ಮತ್ತೆ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ.
ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಕಾರೋಲಿನಾ ಮರಿನ್ ಅವರನ್ನು ಹಿಂದಿಕ್ಕಿ ಟಾಪ್ 5ಕ್ಕೆ ಜಿಗಿದಿದ್ದಾರೆ.
ಹೈದ್ರಾಬಾದ್ ಆಟಗಾರ್ತಿ ಸೆಪ್ಟಂಬರ್ 2019ರಲ್ಲಿ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದರು. ಮೊನ್ನೆ ಆಗಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ನಂತರ ಯಾವ ಟೂರ್ನಿಗಳನ್ನು ಆಡಿಲ್ಲ.
ಕಾಮನ್ವೆಲ್ತ್ ಕೂಟದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಚಿನ್ನ ಗೆದ್ದಿದ್ದರು. ನಂತರ ಗಾಯದ ಸಮಸ್ಯೆಗೆ ಗುರಿಯಾಗಿ ವಿಶ್ವ ಚಾಂಪಿಯನ್ಶಿಪ್ ಆಡಲಿಲ್ಲ.
ಇನ್ನು ಪುರುಷರ ವಿಭಾಗದಲ್ಲಿ ಎಚ್.ಎಸ್.ಪ್ರಣಾಯ್ ರಾಂಕಿಂಗ್ನಲ್ಲಿ 12ನೇ ಸ್ಥಾನಕ್ಕೆ ಜಗಿದಿದ್ದಾರೆ. ಕಿದಂಬಿ ಶ್ರೀಕಾಂತ್ಗಿಂತ ಒಂದು ಸ್ಥಾನ ಹಿಂದಿದ್ದಾರೆ. ಯುವ ಆಟಗಾ ಲಕ್ಷ್ಯ ಸೇನ್ ರಾಂಕಿಂಗ್ನಲ್ಲಿ 8ನೇ ಸ್ಥಾನದಲ್ಲಿಯೇ ಉಳಿದಿದ್ದಾರೆ.
![BWF Ranking ಟಾಪ್ 5ಕ್ಕೆ ಜಿಗಿದ ಪಿ.ವಿ.ಸಿಂಧು 3 Prannoy 1200x900 1](http://sportskarnataka.com/wp-content/uploads/2022/10/Prannoy-1200x900-1-300x225.jpeg)
ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್ ಸೈರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ 8ನೇ ಸ್ಥಾನವನ್ನು ಮರಳಿ ಪಡೆದಿದ್ದಾರೆ.