ಶ್ರೀಲಂಕಾ ವಿರುದ್ಧದ ಗೆಲ್ಲಲ್ಲೇಬೇಕಾದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಆಘಾತ ಎದುರಿಸಿತು. ತಂಡದ ಪ್ರಮುಖ ಸ್ಪಿನ್ನರ್ ಆಡಾಮ್ ಜಾಂಪ ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ.
ಲಂಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸ್ಪಿನ್ನರ್ ಜಾಂಪ ಕಣಕ್ಕಿಳಿದಿಲ್ಲ. ಜಾಂಪಾ ಬದಲು ಮತ್ತೋರ್ವ ಸ್ಪಿನ್ನರ್ ಆಶ್ಟನ್ ಅಗಾರ್ಗೆ ಅವಕಾಶ ನೀಡಲಾಗಿದೆ.
ಡೈಲಿ ಟೆಲಿಗ್ರಾಫ್ ಪ್ರಕಾರ, ಜಾಂಪ ಅವರಿಗೆ ತಗುಲಿರುವ ಕೊರೋನಾ ಸೋಂಕು ಗಂಭೀರವಾಗಿಲ್ಲ. ಆಡಿಸುವ ಬಗ್ಗೆ ಗೊಂದಲ ಇತ್ತು ಎಂದು ಹೇಳಿದೆ.
ಟೂರ್ನಿ ಆರಂಭಕ್ಕೂ ಮುನ್ನ ಕರೋನಾ ಸೋಂಕಿಗೆ ಒಳಗಾದ ಆಟಗಾರ ಆಡಬಹುದೆಂದು ಹೇಳಿತ್ತು. ತಂಡದ ವೈದ್ಯರು ಹೇಳಿದ ಮೇಲಷ್ಟೆ ಆಡಬಹುದೆಂದು ಸ್ಪಷ್ಟನೆ ನೀಡಿತ್ತು.
ಮೊನ್ನೆ ಐರ್ಲೆಂಡ್ ತಂಡದ ಆಟಗಾರ ಜಾರ್ಜ್ ಡಾಕ್ರೆಲ್ ಸೋಂಕಿಗೆ ಗುರಿಯಾಗಿದ್ದರೂ ಶ್ರೀಲಂಕಾ ವಿರುದ್ಧ ಆಡಿದ್ದರು.
ಕೆಲವು ತಿಂಗಳ ಹಿಂದೆಯಷ್ಟೆ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳಾ ಕೂಟದ ಫೈನಲ್ನಲ್ಲಿ ಆಸ್ಟ್ರೇಲಿಯಾದ ತಾಹೀಲಾ ಮೆಕ್ ಗ್ರೆತ್ ಕೊರೋನಾ ಸೋಂಕಿಗೆ ಗುರಿಯಾಗಿ ಆಡದೇ ಪ್ರತ್ಯೇಕವಾಗಿ ಕೂತಿದ್ದರು.