Bhuvaneshwar Kumar ಭುವನೇಶ್ವರ್ ಕುಮಾರ್ ಏನಿದು? ಮತ್ತೆ ಶುರುವಾಯ್ತಾ ಡೆತ್ ಬೌಲಿಂಗ್ ಸಮಸ್ಯೆ?
ಭುವನೇಶ್ವರ್ ಕುಮಾರ್ (Bhuvaneshwar Kumar) ಟೀಮ್ ಇಂಡಿಯಾದ (Team India) ಸ್ಪೆಷಲಿಸ್ಟ್ ಫಾಸ್ಟ್ ಬೌಲರ್. ಆರಂಭದಲ್ಲಿ ಸ್ವಿಂಗ್ ಮೂಲಕ ಕಾಡುವ ಪ್ರೀಮಿಯರ್ ಬೌಲರ್. ಡೆತ್ ಬೌಲಿಂಗ್‌ನಲ್ಲಿ ಚಾಣಾಕ್ಷ್ಯ ಯಾರ್ಕರ್‌ಗಳ ಮೂಲಕ ಎದುರಾಳಿಯನ್ನು ಡೆತ್ ಓವರ್‌ಗಳಲ್ಲಿ ಖೆಡ್ಡಾಕ್ಕೆ ಕೆಡವ ಬೌಲರ್ ಆಗಿದ್ದರು. ಆದರೆ ಕೊನೆಯ ಎರಡು ಪಂದ್ಯಗಳಲ್ಲಿ ಭುವಿ ಎಡವುತ್ತಿದ್ದಾರೆ. ಭಾರತ ಸೋಲುತ್ತಿದೆ.
ಪಾಕ್ ವಿರುದ್ಧ 19 ರನ್ ಲೀಕ್:
ಸೂಪರ್ 4 ಹಂತದಲ್ಲಿ ಭಾರತಕ್ಕೆ ಪಾಕಿಸ್ತಾನ (Pakistan) ವಿರುದ್ಧ ಪಂದ್ಯ ಪ್ರಮುಖವಾಗಿತ್ತು. ಈ ಪಂದ್ಯದಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಅನ್ನುವುದು ನಿರ್ಧಾರವಾಗಿದ್ದೇ 19ನೇ ಓವರ್‌ನಲ್ಲಿ. ಈ ಓವರ್ ಎಸೆದಿದ್ದು ಭುವನೇಶ್ವರ್ ಕುಮಾರ್. ಭುವಿಯ ಮ್ಯಾಜಿಕ್ ನಡೆಯಲಿಲ್ಲ. 19 ರನ್ ಬಿಟ್ಟುಕೊಟ್ಟರು. ಭಾರತದ ಸೋಲು ಖಚಿತವಾಯಿತು.
ಲಂಕಾ ವಿರುದ್ಧವೂ ಎಡವಿದ ಭುವಿ:
ಶ್ರೀಲಂಕಾ ವಿರುದ್ಧವೂ ಭುವನೇಶ್ವರ್ ಮತ್ತದೇ ತಪ್ಪು ಮಾಡಿದರು. ಇಲ್ಲೂ 19ನೇ ಓವರ್ ಎಸೆಯಲು ನಾಯಕ ರೋಹಿತ್ ಶರ್ಮಾ ಅವಕಾಶ ನೀಡಿದ್ದು ಭುವನೇಶ್ವರ್ ಕುಮಾರ್‌ಗೆ. ಇಲ್ಲಿ 14 ರನ್ ಬಿಟ್ಟುಕೊಟ್ಟರು. ಪಂದ್ಯ ಭಾರತದ ಕೈಯಿಂದ ಜಾರಿತು. ಲಂಕಾ ವಿಜಯೋತ್ಸವ ಆಚರಿಸಿತು.
ಸತತ 2 ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ವೈಫಲ್ಯ ಕಂಡಿದ್ದು ಟೀಕೆಗೆ ಗುರಿಯಾಗಿದ್ದಾರೆ. ಡೆತ್ ಓವರ್‌ಗಳಲ್ಲಿ ಸ್ಪೆಷಲಿಸ್ಟ್ (Death Over Specialist) ಆಗಿ ಕಾಣುತ್ತಿದ್ದ ಭುವನೇಶ್ವರ್ ಇದ್ದಕ್ಕಿದ್ದ ಹಾಗೇ ಲಯ ಕಳೆದುಕೊಂಡಿರುವುದು ಟೀಮ್ ಇಂಡಿಯಾಕ್ಕೆ ದುಬಾರಿಯಾಗಿದೆ ಅನ್ನುವುದು ಸತ್ಯ.