team india -srilanka 2nd test – ಬೆಂಗಳೂರು ಪಿಂಕ್ ಬಾಲ್ ಟೆಸ್ಟ್ ಮ್ಯಾಚ್ – ಪಂದ್ಯ ನೋಡಲು 100% ಪ್ರೇಕ್ಷಕರಿಗೆ ಅವಕಾಶ..!

ಮಾರ್ಚ್ 12ರಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಪಿಂಕ್ ಬಾಲ್ ನಲ್ಲಿ ನಡೆಯಲಿರುವ ಈ ಪಂದ್ಯ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ನಡೆಯಲಿದೆ.
ಈಗಾಗಲೇ ಉಭಯ ತಂಡಗಳು ಬೆಂಗಳೂರಿನಲ್ಲಿ ಅಭ್ಯಾಸದಲ್ಲಿ ನಿರತವಾಗಿವೆ. ಟೀಮ್ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ತವಕದಲ್ಲಿದ್ರೆ, ಶ್ರೀಲಂಕಾ ತಂಡ ಸರಣಿಯನ್ನು ಸಮಗೊಳಿಸುವ ಒತ್ತಡದಲ್ಲಿದೆ.
ಆತ್ಮವಿಶ್ವಾಸದಿಂದ ಬೀಗುತ್ತಿರುವ ರೋಹಿತ್ ಬಳಗದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ರೂ ಮಾಡಬಹುದು. ಇನ್ನೊಂದೆಡೆ ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕ ದಾಖಲಿಸುತ್ತಾರಾ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

ವಿರಾಟ್ ಕೊಹ್ಲಿ ಈಗ ತನ್ನ 101ನೇ ಟೆಸ್ಟ್ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ಆಡಲಿದ್ದಾರೆ. Bengaluru Test: Full attendance allowed at Chinnaswamy
ಈ ನಡುವೆ, ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ.
ಈ ಹಿಂದೆ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ವೀಕ್ಷಣೆ ಮಾಡಲು ಶೇ.50ರಷ್ಟು ಅವಕಾಶವನ್ನು ನೀಡಲಾಗಿತ್ತು. ಇದೀಗ ಹಂಡ್ರೆಡ್ ಪರ್ಸೆಂಟ್ ಅವಕಾಶವನ್ನು ನೀಡಲಾಗಿದೆ. ಈ ವಿಷಯವನ್ನು ಕೆಎಸ್ ಸಿಎ ಈಗಾಗಲೇ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನೊಂದೆಡೆ ಅಭಿಮಾನಿಗಳು ಪಂದ್ಯವನ್ನು ನೋಡಲು ಟಿಕೆಟ್ ಗಾಗಿ ಮುಗಿಬೀಳುತ್ತಿದ್ದಾರೆ. ಎರಡು ಮೂರು ವರ್ಷಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಹೀಗಾಗಿ ಅಭಿಮಾನಿಗಳು ಕೂಡ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಒಟ್ಟಿನಲ್ಲಿ ಬೆಂಗಳೂರು ಪಿಂಕ್ ಬಾಲ್ ಟೆಸ್ಟ್ ಮ್ಯಾಚ್ ಪಂದ್ಯಕ್ಕೆ ಕ್ರೀಡಾಂಗಣ ಭರ್ತಿಯಾಗುವ ಸಾಧ್ಯತೆಗಳಿವೆ.