1983ರ ವಿಶ್ವಕಪ್ (1983 Worldcup) ವಿಜೇತ ತಂಡದ ಸ್ಟಾರ್ ಆಲ್‌ರೌಂಡರ್ ಕರ್ನಾಟಕದ ರೋಜರ್ ಬಿನ್ನಿ (Roger Binny) ಬಿಸಿಸಿಐ (BCCI) ಅಧ್ಯಕ್ಷರಾಗುವುದು (President) ಖಚಿತವಾಗಿದೆ. ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಐಸಿಸಿ ಚೇರ್ಮನ್ (ICC Chairman) ಹುದ್ದೆ ಮೇಲೆ ಕಣ್ಣಿಟ್ಟಿರುವುದರಿಂದ ಬಿನ್ನಿ ಈ ಅವಕಾಶ ಪಡೆಯಲಿದ್ದಾರೆ. ಅಕ್ಟೋಬರ್ 18ರಂದು ನಡೆಯುವ ಬಿಸಿಸಿಐನ ವಾರ್ಷಿಕ ಮಹಾಸಭೆಯಲ್ಲಿ (Annual General Body meeting)ಬಿನ್ನಿ ಆಯ್ಕೆ ಅಧಿಕೃತವಾಗಲಿದೆ.
ಬಿಸಿಸಿಐನ ಮೋಸ್ಟ್ ಇನ್‌ಫ್ಲುಯೆನ್ಶಿಯಲ್ ಹುದ್ದೆ ಕಾರ್ಯದರ್ಶಿ ಪೋಸ್ಟ್ ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಗ ಜಯ್ ಶಾ (Jay Shah) ಈ ಹುದ್ದೆಯಲ್ಲ ಮುಂದುವರೆಯುವುದು ಖಚಿತವಾಗಿದೆ. ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಕೂಡ ಹುದೆಯಲ್ಲಿ ಮುಂದುವರೆಯಲಿದ್ದಾರೆ.
ಬಿನ್ನಿ ಜೊತೆಗೆ ಆಶೀಶ್ ಶೆಲಾರ್ (Ashish Shelar) ಮತ್ತು ದೇವಜಿತ್ ಸೈಕಿಯಾ (Devjeet Saikiya) ಹೊಸದಾಗಿ ಬಿಸಿಸಿಐ ಆಡಳಿತ ಮಂಡಳಿಯನ್ನು ಸೇರಿಕೊಳ್ಳಲಿದ್ದಾರೆ. ಖಜಾಂಚಿ ಹುದ್ದೆ ಅಲಂಕರಿಸಲಿರುವ ಶೆಲಾರ್ 2017 ಮತ್ತು 2019ರಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದರು. ಜಂಟಿ ಕಾರ್ಯದರ್ಶಿಯಾಗಿ ಅಸ್ಸಾಂ ಕ್ರಿಕೆಟ್ ಅಸೋಸಿಯೇಶನ್‌ನ ಹಾಲಿ ಕಾರ್ಯದರ್ಶಿ ದೇವಜೀತ್ ಸೈಕಿಯಾ ಆಯ್ಕೆಯಾಗಲಿದ್ದಾರೆ.
ಬಿಸಿಸಿಐ ಹಾಲಿ ಖಜಾಂಜಿ ಅರುಣ್ ಧುಮಾಲ್ (Arun Dhumal) ಐಪಿಎಲ್ ಚೇರ್ಮನ್ ಸ್ಥಾನ ಅಲಂಕರಿಸಲಿದ್ದಾರೆ. ಬ್ರಿಜೇಶ್ ಪಟೇಲ್ (Brijesh Patel)ವಯಸ್ಸು 70ರ ಗಡಿ ದಾಟಿರುವುದರಿಂದ ಈ ಹುದ್ದೆಯನ್ನು ತ್ಯಜಿಸಬೇಕಾದ ಅನಿವಾರ್ಯತೆ ಎದುರಾಗಿದೆ.
67 ವರ್ಷದ ಬಿನ್ನಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ (Karnataka Cricket Association) ವಿವಿಧ ಹುದ್ದೆ ಅಲಂಕರಿಸಿದ್ದರು. 2019ರಿಂದ ಕೆಎಸ್‌ಸಿಎ (KSCA) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿನ್ನಿ ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಜಯ್ ಶಾ 2025ರ ತನಕ ಬಿಸಿಸಿಐ ಸೆಕ್ರೆಟರಿ ಆಗಿ ಮುಂದುವರೆಯಲಿದ್ದಾರೆ. ಒಟ್ಟಿನಲ್ಲಿ ಕನ್ನಡಿಗ ಭಾರತೀಯ ಕ್ರಿಕೆಟ್ ಆಡಳಿತದ ಸರ್ವಶ್ರೇಷ್ಠ ಹುದ್ದೆ ಅಲಂಕರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.