ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಮುಂದಿನ ತಿಂಗಳು ಏಕದಿನ ಮತ್ತು ಟಿ20 ಏಕದಿನ ಸರಣಿ ನಡೆಯಲಿದೆ. ಆದರೆ ಸರಣಿಯ ಆತಿಥ್ಯದ ಸ್ಥಳಗಳು ಕೇವಲ ಆಹ್ಮದಾಬಾದ್ ಮತ್ತು ಕೊಲ್ಕತ್ತಾಕ್ಕೆ ಸೀಮಿತವಾಗಿದೆ. ಸರಣಿಯ ಎಲ್ಲಾ 6 ಪಂದ್ಯಗಳು ಈ ಎರಡು ಮೈದಾನಗಳಲ್ಲೇ ನಡೆಯಲಿದೆ. ಈ ಹಿಂದೆ ಸರಣಿಯ ಒಟ್ಟು 6 ಪಂದ್ಯಗಳನ್ನು 6 ಮೈದಾನಗಳಲ್ಲಿ ಆಯೋಜಿಸಲಾಗಿತ್ತು. ಆದರೆ ಬಯೋಬಲ್ ವ್ಯವಸ್ಥೆಗೆ ಧಕ್ಕೆ ಆಗಬಾರದು ಅನ್ನುವ ಕಾರಣಕ್ಕೆ ಆತಿಥ್ಯದ ಸ್ಥಳಗಳನ್ನು ಕೇವಲ 2ಕ್ಕೆ ಸೀಮಿತಗೊಳಿಸಲಾಗಿದೆ.
ವೆಸ್ಟ್ ಇಂಡೀಸ್ ಜನವರಿ ಅಂತ್ಯದ ವೇಳೆ ಭಾರತಕ್ಕೆ ಆಗಮಿಸಲಿದೆ. ಫೆಬ್ರವರಿ 6 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ODI ಪಂದ್ಯಗಳ ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ಇದಾದ ನಂತರ ಫೆಬ್ರವರಿ 16 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಫೆಬ್ರವರಿ 6, 9 ಮತ್ತು 11 ರಂದು ಅಹಮದಾಬಾದ್‌ನಲ್ಲಿ ಏಕದಿನ ಸರಣಿಯ ಪಂದ್ಯಗಳು ನಡೆಯಲಿದೆ. ಇದಾದ ನಂತರ ಎರಡೂ ತಂಡಗಳು ಕೋಲ್ಕತ್ತಾಗೆ ತೆರಳಲಿದ್ದು, ಅಲ್ಲಿ ಟಿ20 ಸರಣಿಯ ಎಲ್ಲಾ ಮೂರು ಪಂದ್ಯಗಳು 16, 18 ಮತ್ತು 20 ಫೆಬ್ರವರಿಯಂದು ನಡೆಯಲಿವೆ.