ನಿವೃತ್ತ ಕ್ರಿಕೆಟಿಗರ ಮಾಸಿಕ ಪಿಂಚಣಿಯನ್ನು ಶೇ.100ರಷ್ಟು ಹೆಚ್ಚಿಸುವುದಾಗಿ ಬಿಸಿಸಿಐ ಘೋಷಿಸಿದೆ. ಇದರಿಂದ 900 ಮಹಿಳಾ ಮತ್ತು ಪುರುಷ ಕ್ರಿಕೆಟಿಗರು ಹಾಗೂ ಪಂದ್ಯದ ಅಧಿಕಾರಿಗೆ ಅನುಕೂಲವಾಗಲಿದೆ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ. ಬಿಸಿಸಿಐ 2004ರಲ್ಲಿ ನಿವೃತ್ತ ಕ್ರಿಕೆಟಿಗರಿಗೆ ಪಿಂಚಣಿ ನೀಡಲು ಆರಂಭಿಸಿತು. 31 ಡಿಸೆಂಬರ್ 1993 ರ ಮೊದಲು ನಿವೃತ್ತರಾದ ಎಲ್ಲಾ ಕ್ರಿಕೆಟಿಗರನ್ನು ಈ ಪಿಂಚಣಿ ಯೋಜನೆಯಲ್ಲಿ ಸೇರಿಸಲಾಗಿದೆ.
15 ಸಾವಿರ ಪಿಂಚಣಿ ಪಡೆಯುತ್ತಿದ್ದ ಆಟಗಾರರಿಗೆ ಈಗ 30 ಸಾವಿರ ರೂ. ಇದೇ ವೇಳೆ 22 ಸಾವಿರದ 500 ರೂಪಾಯಿ ಪಿಂಚಣಿ ಪಡೆಯುವ ಮಾಜಿ ಕ್ರಿಕೆಟಿಗರು ಮಾಸಿಕ 45 ಸಾವಿರ ರೂಪಾಯಿ ಪಡೆಯಲಿದ್ದಾರೆ. ಇದಲ್ಲದೇ 30 ಸಾವಿರ ಪಿಂಚಣಿ ಪಡೆಯುವ ಮಾಜಿ ಆಟಗಾರರಿಗೆ 52 ಸಾವಿರದ 500, 37 ಸಾವಿರದ 500 ಪಡೆಯುತ್ತಿದ್ದವರಿಗೆ, 60 ಸಾವಿರ ಮತ್ತು 50 ಸಾವಿರ ಆಟಗಾರರಿಗೆ ಮಾಸಿಕ 70 ಸಾವಿರ ಪಿಂಚಣಿ ಸಿಗಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮುಂದಿನ ಐದು ಸೀಸನ್‌ಗಳಿಗೆ (2023 ರಿಂದ 2027) ಮಾಧ್ಯಮ ಹಕ್ಕುಗಳ ಹರಾಜು ಬಿಸಿಸಿಐ ಅನ್ನು ಶ್ರೀಮಂತಗೊಳಿಸಿದೆ. ಭಾರತ ಹಾಗೂ ಉಪಖಂಡಕ್ಕೆ ಸಂಬಂಧಿಸಿದಂತೆ, ಟಿವಿ ಹಕ್ಕುಗಳು ಪ್ರತಿ ಪಂದ್ಯಕ್ಕೆ 57.5 ಕೋಟಿ ರೂಪಾಯಿಗಳಿಗೆ ಮತ್ತು ಡಿಜಿಟಲ್ ಹಕ್ಕುಗಳು ಪ್ರತಿ ಪಂದ್ಯಕ್ಕೆ 50 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ. ಇದರ ಒಟ್ಟು ಬಿಡ್ 44,075 ಕೋಟಿಗಳು. ಈ ಸುದ್ದಿ ಮುನ್ನೆಲೆಗೆ ಬಂದ ನಂತರವೇ, ಜಯ್ ಶಾ ತಮ್ಮ ಮಾಜಿ ಆಟಗಾರರಿಗೆ ಇಂತಹ ದೊಡ್ಡ ಘೋಷಣೆ ಮಾಡಿದ್ದಾರೆ.
ಪಿಂಚಣಿಯನ್ನು ಕೊನೆಯದಾಗಿ 2015 ರಲ್ಲಿ ಹೆಚ್ಚಿಸಿತ್ತು
ಇದಕ್ಕೂ ಮುನ್ನ 2015ರಲ್ಲಿ ಬಿಸಿಸಿಐ ಮಾಜಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರಿಗೆ ಮಾಸಿಕ ಭತ್ಯೆ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಇದರಿಂದ ಮಹಿಳಾ ಮತ್ತು ಪುರುಷ ಆಟಗಾರರಿಬ್ಬರಿಗೂ ಅನುಕೂಲವಾಗಿತ್ತು. ಇದರ ಅಡಿಯಲ್ಲಿ 25 ಪಂದ್ಯಗಳನ್ನು ಆಡಿರುವ ಮತ್ತು ಡಿಸೆಂಬರ್ 31, 1993 ರ ಮೊದಲು ನಿವೃತ್ತಿ ಹೊಂದಿದ ಟೆಸ್ಟ್ ಕ್ರಿಕೆಟಿಗರು ತಿಂಗಳಿಗೆ 50,000 ರೂ. ಇದೇ ವೇಳೆ 1993ರ ನಂತರ ನಿವೃತ್ತಿಯಾದ ಆಟಗಾರರು 37 ಸಾವಿರ ರೂ. ಲಭಿಸಲಿದೆ.