ಇಂದೋರ್ ಪಿಚ್ಗೆ ಕಳಪೆ ರೇಟಿಂಗ್ ನೀಡಿದ ಹಿನ್ನೆಲೆಯಲ್ಲಿ ಬಿಸಿಸಿಐ ಐಸಿಸಿಗೆ ಮೇಲ್ಮನವಿ ಸಲ್ಲಿಸಿದೆ.
ಇತ್ತೀಚೆಗೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೆ ಟೆಸ್ಟ್ ಪಂದ್ಯ ಇಂದೋರ್ ಮೈದಾನದಲ್ಲಿ ನಡೆದಿತ್ತು. ಪಂದ್ಯ ಮೂರೆ ದಿನದಲ್ಲಿ ಮುಕ್ತಾಯವಾಗಿತ್ತು. ಎರಡು ದಿನದ ಅಂತರದಲ್ಲಿ 30 ವಿಕೆಟ್ಗಳು ಉರುಳಿದ್ದವು.
ಆಸ್ಟ್ರೇಲಿಯಾ ತಂಡ 9 ವಿಕೆಟ್ಗಳ ಅಂತರದಿಂದ ಗೆದ್ದು ಸರಣಿಯಲ್ಲಿ ಮೊದಲ ಗೆಲುವು ದಾಖಲಸಿತ್ತು. ಪಂದ್ಯದ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಕಳಪೆ ಪಿಚ್ ಎಂದು ಐಸಿಸಿಗೆ ವರದಿ ನೀಡಿದ್ದರು.
ಪಿಚ್ ಒಣಗಿದ್ದು ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನ ಸಿಗುತ್ತಿಲ್ಲ. ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ನೀಡಿದೆ ಎಂದು ವರದಿ ನೀಡಿದ್ದರು. ಇದರ ಪರಿಣಾಮ 3 ಡಿಮೇರಿಟ್ ಅಂಕಗಳನ್ನು ನೀಡಲಾಯಿತು.
ಇದೀಗ 14 ದಿನದೊಳಗೆ ತೀರ್ಪು ಬರುವ ಮುನ್ನ ಬಿಸಿಸಿಐ ಸಲ್ಲಿಸಿರುವ ಮೇಲ್ಮನವಿಯನ್ನು ಎರಡು ಸದಸ್ಯರನ್ನೊಳಗೊಂಡ ಐಸಿಸಿ ಸಮಿತಿ ಈ ಬಗ್ಗೆ ಪರಿಶೀಲಿಸಲಿದೆ.
ಒಂದು ವೇಳೆ ಮತ್ತೆ ಡಿಮೆರಿಟ್ ಅಂಕಗಳನ್ನು ಪಡೆದರೆ 12 ತಿಂಗಳುಗಳ ಕಾಲ ಇಂದೋರ್ ಪಿಚ್ ಅಂತಾರಾಷ್ಟ್ರೀಯ ಮಟ್ಟದ ಆತಿಥ್ಯವನ್ನು ಕಳೆದುಕೊಳ್ಳಲಿದೆ.