15ನೇ ಆವೃತ್ತಿಯ ಐಪಿಎಲ್ ನಡುವೆ ನಡೆಯಲಿರುವ ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಯ ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂದಾನ ಹಾಗೂ ದೀಪ್ತಿ ಶರ್ಮ ಸಾರಥ್ಯದ ಸೂಪರ್ನೋವಾಸ್, ಟ್ರೈಲ್ಬ್ಲೇಜ಼ರ್ಸ್ ಹಾಗೂ ವೆಲಾಸಿಟಿ ತಂಡಗಳ 16 ಆಟಗಾರ್ತಿಯರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.
ಮೂರು ತಂಡಗಳು ಮೇ 23 ರಿಂದ 28ರವರೆಗೆ ಪುಣೆಯ ಎಂಸಿಎ ಮೈದಾನದಲ್ಲಿ ನಡೆಯಲಿರುವ ವುಮೆನ್ಸ್ ಟಿ20 ಚಾಲೆಂಜ್ ಪಂದ್ಯಾವಳಿಯಲ್ಲಿ ಮುಖಾಮುಖಿ ಆಗಲಿವೆ. ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಮಹಿಳಾ ಆಟಗಾರ್ತಿಯರೊಂದಿಗೆ ಸೌತ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳ ಆಟಗಾರ್ತಿಯರು ಭಾಗವಹಿಸಲಿದ್ದಾರೆ.
ವುಮೆನ್ಸ್ ಟಿ20 ಚಾಲೆಂಜ್ ತಂಡಗಳು ಇಂತಿವೆ:
ಸೂಪರ್ನೋವಾಸ್: ಹರ್ಮನ್ಪ್ರೀತ್ ಕೌರ್(ನಾಯಕಿ), ತಾನಿಯಾ ಬಾಟಿಯಾ, ಅಲನ್ ಕಿಂಗ್, ಆಯುಷ್ ಸೋನಿ, ವಿ. ಚಂದು, ಡಿಯಾಂಡ್ರಾ ಡಾಟಿನ್, ಹರ್ಲನ್ ಡಿಯಾಲ್, ಮೇಘನಾ ಸಿಂಗ್, ಮೋನಿಕಾ ಪಟೇಲ್, ಮುಸ್ಕಾನ್ ಮಲ್ಲಿಕ್, ಪೂಜಾ ವಸ್ತ್ರಾರ್ಕರ್, ಖುಷಿ ಕನೋಜಿಯಾ, ಶೋಫಿನ್ ಎಕ್ಲೋಸ್ಟೋನ್, ಸುನೆ ಲುಸ್, ಮಾನ್ಸಿ ಜೋಶಿ.
ಟ್ರೈಯಲ್ ಬ್ಲೇಜ಼ರ್ಸ್: ಸ್ಮೃತಿ ಮಂದಾನ(ನಾಯಕಿ), ಪೂನಂ ಯಾದವ್, ಅರುಂಧತಿ ರೆಡ್ಡಿ, ಹೈಲಿ ಮ್ಯಾಥ್ಯೂವ್ಸ್, ಜಮೀಮಾ ರೋಡ್ರಿಗಸ್, ಪ್ರಿಯಾಂಕ ಪ್ರಿಯದರ್ಶಿನಿ, ರಾಜೇಶ್ವರಿ ಗಾಯಕ್ವಾಡ್, ರಿಂಕೂ ಸಿಂಗ್, ರಿಚಾ ಘೋಶ್, ಎಸ್.ಮೇಘನಾ, ಸೈಕಾ ಇಶಾಕ್, ಸಲ್ಮಾನ್ ಕತುನ್, ಶರ್ಮಿನ್ ಅಕ್ತರ್, ಶೋಫಿನ್ ಬ್ರೌನ್, ಸುಜಾತ ಮಲ್ಲಿಕ್, ಎಸ್.ಬಿ.ಪೋಖರ್ಕರ್.
ವೆಲಾಸಿಟಿ: ದೀಪ್ತಿ ಶರ್ಮ(ನಾಯಕಿ), ಸ್ನೇಹ ರಾಣ, ಶಫಾಲಿ ವರ್ಮ, ಅಯಬೋಂಗ್ ಕಾಕಾ, ಕೆ.ಪಿ.ನವಗಿರೆ, ಕ್ಯಾಥರಿನ್ ಕ್ರಾಸ್, ಕೀರ್ತಿ ಜೇಮ್ಸ್, ಲೌರಾ ವೋಲ್ವಾರ್ಡ್, ಮಯಾ ಸೋನವನೆ, ನತ್ತಾಕನ್ ಚಂತಮ್, ರಾಧಾ ಯಾದವ್, ಆರತಿ ಕೇಧಾರ್, ಶಿವಾಲಿ ಶಿಂಧೆ, ಸಿಮ್ರಾನ್ ಬಹದ್ದೂರ್, ಯಾಸ್ತಿಕ ಭಾಟಿಯಾ, ಪ್ರಣವೀ ಚಂದ್ರ.
ವುಮೆನ್ಸ್ ಟಿ20 ಚಾಲೆಂಜ್:
2022ರ ಐಪಿಎಲ್ ಟೂರ್ನಿಯ ಪ್ಲೇ-ಆಫ್ ಪಂದ್ಯಗಳ ನಡುವೆ ಮಹಿಳಾ ಟಿ20 ಚಾಲೆಂಜ್ ಪಂದ್ಯಗಳು ನಡೆಯಲಿದೆ. ಟೂರ್ನಿಯ ಮೊದಲ ಪಂದ್ಯ ಮೇ 23ರಂದು ಸಂಜೆ 7.30ಕ್ಕೆ ನಡೆಯಲಿದ್ದು, ಮೇ 28ರಂದು ಫೈನಲ್ ಪಂದ್ಯ ನಡೆಯಲದೆ.
ಮೇ 23 ಟ್ರೈಯಲ್ ಬ್ಲೇಜ಼ರ್ v ಸೂಪರ್ನೋವಾಸ್ (ಸಂಜೆ 7.30)
ಮೇ 24 ಸೂಪರ್ನೋವಾಸ್ v ವೆಲಾಸಿಟಿ (ಮಧ್ಯಾಹ್ನ 3.30)
ಮೇ 26 ವೆಲಾಸಿಟಿ v ಟ್ರೈಯಲ್ಬ್ಲೇಜ಼ರ್ (ಸಂಜೆ 7.30)
ಮೇ 28ರಂದು ಸಂಜೆ 7.30ಕ್ಕೆ ಫೈನಲ್ ಪಂದ್ಯ ನಡೆಯಲಿದೆ.