ಟೀಮ್ ಇಂಡಿಯಾ ಮತ್ತು ವೆಸ್ಟ್ಇಂಡೀಸ್ ನಡುವಿನ ಟಿ20 ಸರಣಿ ಆಂಭವಾಗುತ್ತಿದೆ. ಚುಟುಕು ಸರಣಿಯಲ್ಲಿ ಒಟ್ಟು 3 ಪಂದ್ಯಗಳು ಇರಲಿದ್ದು ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ.
ಫೆಬ್ರವರಿ 16, ಫೆಬ್ರವರಿ 18 ಮತ್ತು ಫೆಬ್ರವರಿ 20ರಂದು 3 ಚುಟುಕು ಪಂದ್ಯಗಳು ನಡೆಯಲಿವೆ. ಮೊದಲ ಎರಡು ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿಲ್ಲ. ಮೂರನೇ ಪಂದ್ಯಕ್ಕೆ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.
ಮೊದಲೆರಡು ಟಿ20 ಪಂದ್ಯಗಳ ವೇಳೆಯಲ್ಲಿ ಕ್ಲಬ್ ಹೌಸ್ ಅಪ್ಪರ್ ಸ್ಟ್ಯಾಂಡ್ ಮತ್ತು ಹಾಸ್ಪಿಟಾಲಿಟಿ ಏರಿಯಾದಲ್ಲಿ ಕೆಲ ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತದೆ. ಆದರೆ 3ನೇ ಪಂದ್ಯದ ವೇಳೆ ಶೇಕಡಾ 75ರಷ್ಟು ಪ್ರೇಕ್ಷರಿಗೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ.
ಪಶ್ಚಿಮ ಬಂಗಾಳದಲ್ಲಿ ಕೊರೊನಾ ಕೇಸ್ಗಳು ಕಡಿಮೆ ಇರುವ ಕಾರಣದಿಂದ ಅಲ್ಲಿನ ರಾಜ್ಯ ಸರ್ಕಾರ ಎಲ್ಲಾ ಪಂದ್ಯಗಳಿಗೂ ಪ್ರೇಕ್ಷರಿಗೆ ಅವಕಾಶ ನೀಡಬಹುದು ಎಂದು ಹೇಳಿತ್ತು. ಆದರೆ ಬಿಸಿಸಿಐ ಆರೋಗ್ಯದ ಹಿತದೃಷ್ಟಿಯಿಂದ ಮೊದಲೆರಡು ಪಂದ್ಯಗಳಿಗೆ ಪ್ರೇಕ್ಷಕರನ್ನು ನಿರಾಕರಿಸಿತ್ತು.