Virat Kohli ಈಗಲೂ ಕಿಂಗ್, ಇಲ್ಲಿದೆ ಮೂರು ವರ್ಷಗಳ ಅಂಕಿ ಅಂಶ
ಕಳೆದೊಂದು ದಶಕದಿಂದ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟಿಂಗ್‌ನಿಂದ ತಲ್ಲಣ ಮೂಡಿಸಿರುವ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕೈಬಿಡುವಂತೆ ಒತ್ತಾಯ ಕೇಳಿಬರುತ್ತಿದೆ. ಸೋಷಿಯಲ್ ಮೀಡಿಯಾ ಬಳಕೆದಾರರಿಂದ ಹಿಡಿದು ಕ್ರಿಕೆಟ್ ದಿಗ್ಗಜರವರೆಗೂ ಕಿಂಗ್ ಕೊಹ್ಲಿಯ ಯುಗ ಮುಗಿದಿದೆ ಎಂದು ಭಾವಿಸುತ್ತಿದ್ದಾರೆ.
ಭಾರತೀಯ ಅಭಿಮಾನಿಗಳಿಗೆ ಹಲವು ಗೆಲುವಿನ ಸಂಭ್ರಮಾಚರಣೆಗೆ ಅವಕಾಶಗಳನ್ನು ನೀಡಿದ ಆಟಗಾರ, ಇಂದು ಅವರ ಹಿಂದೆಯೇ ಅಭಿಮಾನಿಗಳು ಬಿದ್ದಿದ್ದಾರೆ, ಆದರೆ ಕೊಹ್ಲಿ ಅವರನ್ನು ತಂಡದಿಂದ ಕೈಬಿಡುವಷ್ಟು ಕಳಪೆಯಾಗಿ ಆಡುತ್ತಿದ್ದಾರೆಯೇ?

ನಿಜಕ್ಕೂ ಕೊಹ್ಲಿ ಯುಗ ಮುಗಿಯಿತೇ? ಅಂಕಿಅಂಶಗಳ ಪ್ರಕಾರ, ಇದು ಹಾಗಲ್ಲ. ಕೊಹ್ಲಿ ಈಗಲೂ ಟೀಂ ಇಂಡಿಯಾದ ಅತ್ಯುತ್ತಮ ಬ್ಯಾಟ್ಸ್‌ಮನ್. ನಾವು ಇದನ್ನು ಏಕೆ ಹೇಳುತ್ತಿದ್ದೇವೆ, ಇಲ್ಲಿದೆ ಅಂಕಿ ಅಂಶ.

ವಿರಾಟ್ 2020 ರ ನಂತರ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಟಿ-20ಯಲ್ಲಿ 663 ರನ್, ಏಕದಿನದಲ್ಲಿ 702 ಮತ್ತು ಟೆಸ್ಟ್ ಪಂದ್ಯಗಳಲ್ಲಿ 767 ರನ್ ಗಳಿಸಿದ್ದಾರೆ. ಎಲ್ಲಾ ಮೂರು ಸ್ವರೂಪಗಳನ್ನು ಒಟ್ಟುಗೂಡಿಸಿ ವಿರಾಟ್ 2237 ರನ್ ಗಳಿಸಿದ್ದಾರೆ. ಇದು 2020 ರ ನಂತರ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ರನ್ ಆಗಿದೆ. ಅವರ ನಂತರ ರಿಷಬ್ ಪಂತ್ 2213 ಮತ್ತು ರೋಹಿತ್ ಶರ್ಮಾ 2039 ರನ್ ಗಳಿಸಿದ್ದಾರೆ. ವಿರಾಟ್ 60 ಪಂದ್ಯಗಳ 71 ಇನ್ನಿಂಗ್ಸ್‌ಗಳಲ್ಲಿ ಈ ರನ್ ಗಳಿಸಿದ್ದಾರೆ. ರೋಹಿತ್ 47 ಪಂದ್ಯಗಳಿಂದ 58 ಇನ್ನಿಂಗ್ಸ್‌ಗಳನ್ನು ಮಾಡಿದ್ದರೆ, ಪಂತ್ 54 ಪಂದ್ಯಗಳಿಂದ 64 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.

ಟಾಪ್-10ರಲ್ಲಿ ವಿರಾಟ್ ಗೆ ಏಳನೆ ಸ್ಥಾನ
ಮೂರು ವರ್ಷಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಂಬರ್-1 ಆಗಿದ್ದಾರೆ. ಅವರು ಎಲ್ಲಾ ಮೂರು ಮಾದರಿಗಳಲ್ಲಿ 3508 ರನ್ ಗಳಿಸಿದ್ದಾರೆ. ಅದೇ ಹೊತ್ತಿಗೆ ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ. ರಿಷಬ್ ಪಂತ್ 9ನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ. ಆದರೆ, ರೋಹಿತ್ ಮತ್ತು ರಿಷಬ್ ಅವರ ಸರಾಸರಿ ಕೊಹ್ಲಿಗಿಂತ ಹೆಚ್ಚಾಗಿದೆ. ವಿರಾಟ್ 34.95 ಸರಾಸರಿಯಲ್ಲಿ ರನ್ ಗಳಿಸಿದ್ದರೆ, ಪಂತ್ ಸರಾಸರಿ 39.05 ಆಗಿದೆ. 2020 ರ ನಂತರ ರೋಹಿತ್ ಶರ್ಮಾ ಸರಾಸರಿ 39.21.

ಕಳೆದ ಮೂರು ವರ್ಷಗಳಿಂದ ವಿರಾಟ್ ಒಂದೇ ಒಂದು ಶತಕ ಸಿಡಿಸಿಲ್ಲ. 2008 ಮತ್ತು 2021 ರ ನಡುವೆ, ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ 70 ಶತಕಗಳನ್ನು ಗಳಿಸಿದ್ದಾರೆ. ಅವರು 71 ಮತ್ತು 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿರುವ ರಿಕಿ ಪಾಂಟಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗಿಂತ ಮುಂದಿದ್ದಾರೆ. ಹೀಗಿರುವಾಗ ಶತಕ ಸಿಡಿಸದೇ ವಿರಾಟ್ ತಂಡದಲ್ಲಿದ್ದರೆ ಪ್ರಯೋಜನವಿಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ದಿಗ್ಗಜರ ಅಭಿಪ್ರಾಯ.
Virat Kohli, Team India, Cricket, Sports