ಭಾರತ ಪುರುಷರ ಹಾಗೂ ಮಹಿಳಾ ತಂಡ ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಶುಕ್ರವಾರ ನಿರಾಸೆ ಅನುಭವಿಸಿದೆ.
ಪುರುಷರ ತಂಡ 2-3 ರಿಂದ ಇಂಡೋನೇಷ್ಯಾ ವಿರುದ್ಧ ನಿರಾಸೆ ಅನುಭವಿಸಿತು. ಸಿಂಗಲ್ಸ್ ನಲ್ಲಿ ಭಾರತದ ಲಕ್ಷ್ಯ 18-21, 25-27 ರಿಂದ ಸೇನ್ ಚಿಕೋ ಔರಾ ದ್ವಿ ವಾರ್ಡೋಯೋ ವಿರುದ್ಧ ಗೆಲುವು ಅನುಭವಿಸಿದರು. ಡಬಲ್ಸ್ ನಲ್ಲಿ ಲಿಯೋ ರೋಲಿ ಕಾರ್ನಾಂಡೋ / ಡೇನಿಯಲ್ ಮಾರ್ಟಿನ್ 21-16, 21-10 ರಿಂದ ಭಾರತದ ಮಂಜಿತ್ ಸಿಂಗ್ ಖ್ವೈರಕ್ಪಮ್ / ಡಿಂಕು ಸಿಂಗ್ ಕೊಂತೌಜಮ್ ವಿರುದ್ಧ ಜಯ ಕಂಡಿತು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಇಖ್ಸಾನ್ ರುಂಬೆ 21-13, 17-21, 21-10 ರಿಂದ ಭಾರತದ ಕಿರಣ್ ಜಾರ್ಜ್ ವಿರುದ್ಧ ಜಯ ಸಾಧಿಸಿತು.
ಉಳಿದಂತೆ ಮಿಥುನ್ ಮಂಜುನಾಥ್ 21-12, 15-21, 21-17 ರಿಂದ ಯೋನಾಥನ್ ರಾಮ್ಲಿ ವಿರುದ್ಧ ಜಯ ಸಾಧಿಸಿದರು. ಈ ಮೂಲಕ ಭಾರತ ಮೂರು ಪಂದ್ಯಗಳಲ್ಲಿ 1 ಅಂಕ ಕಲೆ ಹಾಕಿದ್ದು ಮೂರನೇ ಸ್ಥಾನದಲ್ಲಿದೆ.
ಉಳಿದಂತೆ ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತ 1-4 ರಿಂದ ಜಪಾನ್ ವಿರುದ್ಧ ಆಘಾತ ಅನುಭವಿಸಿತು. ಮಹಿಳಾ ವಿಭಾಗದಲ್ಲಿ ಅಶ್ಮಿತ್ ಚಲಿಹಾ 21-17, 10-21, 21-19 ರಿಂದ ಜಪಾನ್ ನ ರಿಕೊ ವಿರುದ್ಧ ಜಯ ಸಾಧಿಸಿದ್ದು ಬಿಟ್ಟರೆ ಉಳಿದ ಆಟಗಾರರು ನಿರಾಸೆ ಅನುಭವಿಸಿದರು.