World Athletics: ಅವಿನಾಶ್ ಸೇಬಲ್ ಗೆ 11ನೇ ಸ್ಥಾನ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯ ಫೈನಲ್‌ನಲ್ಲಿ ಭಾರತದ ಅವಿನಾಶ್ ಸೇಬಲ್ 11 ನೇ ಸ್ಥಾನ ಪಡೆದರು. ಮಂಗಳವಾರ ನಡೆದ ಸ್ಪರ್ಧೆಯಲ್ಲಿ 27 ವರ್ಷ ವಯಸ್ಸಿನ ಅವಿನಾಶ್ ಸೇಬಲ್ 8 ನಿಮಿಷ 3 1.75 ಸೆಕೆಂಡಗಳ ಸಮಯದಲ್ಲಿ ಗುರಿ ಮುಟ್ಟಿ 11 ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಇದು ಅವಿನಾಶ್ ಅವರ ಪ್ರಸಕ್ತ ಋತುವಿನ ಮತ್ತು ವೈಯಕ್ತಿಕ ಅತ್ಯುತ್ತಮವಾದ 8 ನಿಮಿಷ 12.48 ಸೆ.ಗಳಿಗಿಂತ ಕಡಿಮೆಯಾಗಿದೆ. ಇದು ಅವರ ರಾಷ್ಟ್ರೀಯ ದಾಖಲೆಯಾಗಿತ್ತು. ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಸೌಫೈನ್ ಎಲ್ ಬಕ್ಕಲಿ ಅಗ್ರಸ್ಥಾನ ಗಳಿಸಿದರೆ, ಲಮೆಚಾ ಗಿರ್ಮಾ ಎರಡನೇ ಸ್ಥಾನ ಹಾಗೂ ಕೀನ್ಯಾದ ಕಾನ್ಸೆಸ್ಲಸ್ ಕಿಪ್ರುಟೊ ಮೂರನೇ ಸ್ಥಾನ ಪಡೆದರು.
ಮಹಾರಾಷ್ಟ್ರದ ಬೀಡ್ ಮೂಲದವರಾದ ಅವಿನಾಶ್ ಸೇಬಲ್, ಇತ್ತೀಚಿನ ದಿನಗಳಲ್ಲಿ ಹೆಚ್ಚು ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಭಾರತೀಯ ಅಥ್ಲೀಟ್‌ಗಳ ಪೈಕಿ ಒಬ್ಬರೆನಿಸಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸತತವಾಗಿ ಎರಡನೇ ಬಾರಿ ಫೈನಲ್ ಪ್ರವೇಶಿಸಿದ ಸೇಬಲ್ ಹೀಟ್‌ನಲ್ಲಿ 8:18.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 15 ಸ್ಪರ್ಧಿಗಳೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು.
ಕಳೆದ ಕೆಲವು ವರ್ಷಗಳಲ್ಲಿ ಅವಿನಾಶ್ ಸೇಬಲ್‌ನ ಪ್ರದರ್ಶನ ಸ್ಥಿರವಾಗಿದೆ. ಪಾದದ ಗಾಯದಿಂದಾಗಿ ಅವರು 2018ರ ಏಷ್ಯನ್ ಗೇಮ್ಸ್ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಅದೇ ವರ್ಷದ ನಂತರ ಅವರು 2018ರ ಒಡಿಶಾದ ಭುವನೇಶ್ವರದಲ್ಲಿ ರಾಷ್ಟ್ರೀಯ ಓಪನ್ ಚಾಂಪಿಯನ್‌ಶಿಪ್‌ನಲ್ಲಿ 8 ನಿ 29.80 ಸೆ.ಗಳಲ್ಲಿ ಗುರಿ ಮುಟ್ಟಿ ಗೋಪಾಲ್ ಸೈನಿ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಗೋಪಾಲ್ ಸೈನಿ 8 ನಿ 30.88 ಸೆಗಳಲ್ಲಿ ಗುರಿ ಮುಟ್ಟಿದ್ದು, ಆ ವರೆಗಿನ ರಾಷ್ಟಿçÃಯ ದಾಖಲೆ ಎನಿಸಿತ್ತು.
Avinash Sable, 3000m Steeplechase, World Athletics, Championship