ಮಂಧ ಬೆಳಕು ಹಾಗೂ ಮಳೆಯಿಂದಾಗಿ ಆತಿಥೇಯ ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ನಡುವಿನ 3ನೇ ಟೆಸ್ಟ್ ಪಂದ್ಯ ಸ್ಥಗಿತಗೊಂಡಿತು.
ಸಿಡ್ನಿಯಲ್ಲಿಯಲ್ಲಿ ಆರಂಭವಾದ 3ನೇ ಟೆಸ್ಟ್ ಪಂದ್ಯದ ಮೊದಲನೆ ದಿನದಾಟದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು.
ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ವಾರ್ನರ್ ಮೊದಲ ಇನ್ನಿಂಗ್ಸ್ ನಲ್ಲಿ 10 ರನ್ ಗಳಿಸಿ ವೇಗಿ ನೋರ್ಟ್ಜೆಗೆ ವಿಕೆಟ್ ಒಪ್ಪಿಸಿದರು.
ಓಪನರ್ ಉಸ್ಮಾನ್ ಖವಾಜಾ ಜೊತೆಗೂಡಿದ ಮಾರ್ನಸ್ ಲಾಬುಸ್ಚಾಗ್ನೆ ತಂಡದ ಕುಸಿತ ತಡೆದರು.
ಲಾಬುಸ್ಚಾಗ್ನೆ 102 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರೆ ಉಸ್ಮಾನ್ ಖವಾಜಾ 113 ಎಸೆತದಲ್ಲಿ ಅರ್ಧ ಶತಕ ಸಿಡಿಸಿ ಆಫ್ರಿಕಾ ಬೌಲರ್ಗಳ ಬೆವರಿಳಿಸಿದರು. 47ನೇ ಓವರ್ ವೇಳೆಗೆ ಜೋರಾಗಿ ಮಳೆ ಸುರಿದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.