ಟೀಂ ಇಂಡಿಯಾ(Team India)ದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್(Yuzvendra Chahal) ಶ್ರೀಲಂಕಾ ವಿರುದ್ಧದ ಎರಡನೇ T20I ಪಂದ್ಯದಲ್ಲಿ ಹೊಸದೊಂದು ಮೈಲುಗಲ್ಲು ತಲುಪಲು ಕಾಯುತ್ತಿದ್ದು, ಇದಕ್ಕಾಗಿ ಚಹಲ್ಗೆ ನಾಲ್ಕು ವಿಕೆಟ್ಗಳ ಅಗತ್ಯವಿದೆ.
ಭಾರತದ ಸ್ಪಿನ್ ಅಸ್ತ್ರವಾಗಿರುವ ಚಹಲ್, ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಲು ಕಾಯುತ್ತಿದ್ದಾರೆ. ಸದ್ಯ ಭಾರತದ ಪರ ತವರಿನಲ್ಲಿ ಟಿ20 ಕ್ರಿಕೆಟ್ನಲ್ಲಿ ಅಧಿಕ ವಿಕೆಟ್ ಪಡೆದ ಹೆಗ್ಗಳಿಕೆ ಟೀಂ ಇಂಡಿಯಾದ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ ಕುಮಾರ್ ಹೆಸರಿನಲ್ಲಿದೆ. 32 ವರ್ಷದ ಯುಜ್ವೇಂದ್ರ ಚಹಲ್ 71 ಟಿ20 ಪಂದ್ಯಗಳಿಂದ 87 ವಿಕೆಟ್ ಪಡೆದಿದ್ದು, ಭುವನೇಶ್ವರ್ ಕುಮಾರ್ 87 ಪಂದ್ಯಗಳಿಂದ 90 ವಿಕೆಟ್ ಪಡೆದಿದ್ದಾರೆ. ಆದರೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭುವನೇಶ್ವರ್ ಕುಮಾರ್ ಆಯ್ಕೆಯಾಗದ ಹಿನ್ನೆಲೆಯಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳುವ ಎಲ್ಲಾ ಅವಕಾಶ ಯುಜ್ವೇಂದ್ರ ಚಹಲ್ ಹೊಂದಿದ್ದಾರೆ.
ಅಲ್ಲದೇ ಯುಜ್ವೇಂದ್ರ ಚಹಲ್ ಮತ್ತೊಂದು ಮೈಲುಗಲ್ಲಿನ ಮೇಲೆ ಕಣ್ಣಿಟ್ಟಿದ್ದು, ಎಲೈಟ್ ಲಿಸ್ಟ್ ಬೌಲರ್ಗಳ ಸಾಲಿನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ ಸೇರಿಕೊಳ್ಳಲು 5 ವಿಕೆಟ್ ಹಿಂದಿದ್ದಾರೆ. ತವರಿನಲ್ಲಿ 50ಕ್ಕೂ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ಯುಜ್ವೇಂದ್ರ ಚಹಲ್, 35 ಪಂದ್ಯಗಳಿಂದ 45 ವಿಕೆಟ್ಗಳನ್ನ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧ ಅದ್ಭುತ ಸಾಧನೆ ಹೊಂದಿರುವ ಚಹಲ್, 10 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸಿದ್ದಾರೆ.