ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಸಿಮೋನಾ ಹಲೆಪ್ ಅವರನ್ನು ಮೂರು ಸೆಟ್ಗಳ ಹೋರಾಟದಲ್ಲಿ ಸೋಲಿಸಿದ ಅಲೈಸ್ ಕಾರ್ನೆಟ್, ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಮಹಿಳಾ ವಿಭಾಗದ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ಹಂತ ಕಂಡಿದ್ದಾರೆ.
ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅಲೈಸ್ ಕಾರ್ನೆಟ್, ಸಿಮೋನಾ ಹಲೆಪ್ ಅವರನ್ನು 6-4, 3-6, 6-4 ರಿಂದ ಸೋಲಿಸಿ ಮುನ್ನಡೆದರು. ಮೊದಲ ಸೆಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕಾರ್ನೆಟ್ ಸೊಗಸಾದ ಆಟದ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು. ಅಲ್ಲದೆ ಎರಡನೇ ಸೆಟ್ ನಲ್ಲಿ ಹಲೆಪ್ ಲಯ ಬದ್ಧ ಆಟವಾಡಿ ಅಂಕಗಳನ್ನು ಕಲೆ ಹಾಕಿ ಎದುರಾಳಿ ಜಯದ ಓಟಕ್ಕೆ ಬ್ರೇಕ್ ಹಾಕಿದರು. ಮೂರನೇ ಸೆಟ್ ನಲ್ಲಿ ಕೆಚ್ಚೆದೆಯ ಆಟವಾಡಿದ ಕಾರ್ನೆಟ್ 6-4 ರಿಂದ ಸೆಟ್ ಗೆದ್ದು ಮುನ್ನಡೆ ಸಾಧಿಸಿದರು.
27 ನೇ ಶ್ರೇಯಾಂಕದ ಅಮೆರಿಕೆಯ ಡೇನಿಯಲ್ ಕಾಲಿನ್ಸ್, ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಮಹಿಳಾ ಇಭಾಗದ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಡೇನಿಯಲ್ ಕಾಲಿನ್ಸ್ ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಅವರನ್ನು 4-6, 6-4, 6-4 ರಿಂದ ಮೂರು ಸೆಟ್ಗಳ ಹೋರಾಟದಲ್ಲಿ ಸೋಲಿಸಿ ಎಂಟರ ಹಂತ ಕಂಡರು.