Australian Open final. – ಸ್ಪೇನ್ ಗೂಳಿಯ ನಾಗಾಲೋಟ.. ಫೈನಲ್ಗೆ ನಡಾಲ್
ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಏಳನೇ ಶ್ರೇಯಾಂಕಿತ ಇಟಲಿಯ ಮ್ಯಾಟೊ ಬೆರೆಟಿನಿ ಅವರನ್ನು ಪರಾಭವಗೊಳಿಸಿದ್ರು.
ಇದರೊಂದಿಗೆ ರಫೆಲ್ ನಡಾಲ್ ಅವರು 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿದ್ದಾರೆ. ಈಗಾಗಲೇ ರೋಜರ್ ಫೆಡರರ್, ನೊವಾಕ್ ಜಾಕೊವಿಕ್ ಮತ್ತು ರಫೆಲ್ ನಡಾಲ್ ಅವರು ತಲಾ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದೀಗ ರಫೆಲ್ ನಡಾಲ್ ಅವರು ಫೆಡರರ್ ಮತ್ತು ಜಾಕೊವಿಕ್ ಅವರನ್ನು ಹಿಂದಿಕ್ಕಿ ಹೊಸ ಇತಿಹಾಸ ಬರೆಯುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. Rafael Nadal
ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಡೇನಿಯಲ್ ಮೆಡ್ವಡೇವ್ ಅಥವಾ ಸ್ಟೆಫಾನೊಸ್ ಸಿಟ್ಸಪಸ್ ಅವರನ್ನು ಎದುರಿಸಲಿದ್ದಾರೆ.
35ರ ಹರೆಯದ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುತ್ತಿರುವುದು ಇದು ಆರನೇ ಬಾರಿ. ಈ ಹಿಂದೆ 2009ರಲ್ಲಿ ಫೈನಲ್ ಪ್ರವೇಶಿಸಿ ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದರು. ಇದೀಗ 12 ವರ್ಷಗಳ ಬಳಿಕ ಮತ್ತೆ ಮೆಲ್ಬರ್ನ್ ಪಾರ್ಕ್ ನಲ್ಲಿ ಪ್ರಶಸ್ತಿ ಗೆಲ್ಲುವುದನ್ನು ಎದುರು ನೋಡುತ್ತಿದ್ದಾರೆ.
ರಫೆಲ್ ನಡಾಲ್ ಅವರು 13 ಬಾರಿ ಫ್ರೆಂಚ್ ಓಪನ್, ಎರಡು ಬಾರಿ ವಿಂಬಲ್ಡನ್, ನಾಲ್ಕು ಬಾರಿ ಯುಎಸ್ ಓಪನ್ ಹಾಗೂ ಒಂದು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ನನ್ನ ಟೆನಿಸ್ ಬದುಕಿನಲ್ಲಿ ನಾನು ಸ್ವಲ್ಪ ದುರಾದೃಷ್ಟವಂತ. ಗಾಯದ ಸಮಸ್ಯೆ ನನ್ನನ್ನು ಸದಾ ಕಾಡುತ್ತಿದೆ. ಈ ನಡುವೆ ಕೆಲವೊಂದು ಅದ್ಭುತ ಫೈನಲ್ ಪಂದ್ಯಗಳನ್ನು ಆಡಿದ್ದೇನೆ ಕೆಲವೊಂದು ಬಾರಿ ಪ್ರಶಸ್ತಿ ಗೆಲ್ಲುವ ಸನೀಹದಲ್ಲಿ ಎಡವಿದ್ದೇನೆ. ಆದ್ರೆ ನನಗೆ ಈಗ ತುಂಬಾನೇ ಖುಷಿಯಾಗುತ್ತಿದೆ. 2009ರಲ್ಲಿ ನಾನು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದೆ. ಆದ್ರೆ 2022ರಲ್ಲಿ ನಾನು ಮತ್ತೆ ಫೈನಲ್ ಪಂದ್ಯ ಆಡುತ್ತೆನೆ ಅಂತ ಅಂದುಕೊಂಡಿರಲಿಲ್ಲ ಎಂದು ರಫೆಲ್ ನಡಾಲ್ ಹೇಳಿದ್ದಾರೆ.