ಆಸ್ಟ್ರೇಲಿಯನ್ ಓಪನ್ 2022- ರೋಹನ್ ಬೋಪಣ್ಣ – ಎಡ್ವರ್ಡ್ ಜೋಡಿಗೆ ಆರಂಭದಲ್ಲೇ ಆಘಾತ
ಭಾರತದ ರೋಹನ್ ಬೋಪಣ್ಣ ಮತ್ತು ಫ್ರೆಂಚ್ ನ ಎಡ್ವರ್ಡ್ ರೋಜರ್ ವಾಸೆಲಿನ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದ ಆರಂಭದಲ್ಲಿ ಅದ್ಭುತವಾಗಿ ಆಡಿದ್ದ ರೋಹನ್ ಮತ್ತು ಎಡ್ವರ್ಡ್ ಅವರು ನಂತರದ ಸೆಟ್ ಗಳಲ್ಲಿ ಹಿಡಿತ ಸಾಧಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾದ್ರು.
Australian Open 2022: Rohan Bopanna-Vasselin pair’s campaign ends
ಅಂತಿಮವಾಗಿ ರೋಹನ್ ಬೋಪಣ್ಣ ಮತ್ತು ಎಡ್ವರ್ಡ್ ರೋಜರ್ ವಾಸೆಲಿನ್ ಅವರು 6-3, 6-7, 2-6ರಿಂದ ಫಿಲಿಪ್ಪೈನ್ಸ್ ನ ಕ್ರಿಸ್ಟೋಫರ್ ರಂಗ್ಕಟ್ ಮತ್ತು ಟ್ರೀಟ್ ಹುಯ್ ಅವರಿಗೆ ತಲೆಬಾಗಿದ್ದರು. ಈ ಪಂದ್ಯ ಒಂದು ಗಂಟೆ 48 ನಿಮಿಷಗಳ ಕಾಲ ನಡೆದಿತ್ತು. ಫಿಲಿಪ್ಪೈನ್ಸ್ ನ ಕ್ರಿಸ್ಟೋಫರ್ ರಂಗ್ಕಟ್ ಮತ್ತು ಟ್ರೀಟ್ ಹುಯ್ ಅವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದುಕೊಂಡಿದ್ದರು.