Australian Open 2022 ಇತಿಹಾಸ ಬರೆಯಲು ಆಶ್ಲೇಘ್ ಬಾರ್ಟಿ ಇನ್ನೂ ಒಂದೇ ಒಂದು ಹೆಜ್ಜೆ..!
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಆಸ್ಟ್ರೇಲಿಯಾದ ಆಶ್ಲೇಘ್ ಬಾರ್ಟಿ ಅವರು ಫೈನಲ್ ಪ್ರವೇಶಿಸಿದ್ದಾರೆ.
ಮೆಲ್ಬರ್ನ್ ಪಾರ್ಕ್ ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಶ್ಲೇಘ್ ಬಾರ್ಟಿ ಅವರು 6-1, 6-3ರಿಂದ ಅಮೆರಿಕಾದ ಮ್ಯಾಡಿಸನ್ ಕೈಸ್ ಅವರನ್ನು ಪರಾಭವಗೊಳಿಸಿದ್ರು.
ಈ ಗೆಲುವಿನೊಂದಿಗೆ ಆಶ್ಲೇಘ್ ಬಾರ್ಟಿ ಅವರು ಹೊಸ ಇತಿಹಾಸ ದಾಖಲಿಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ ಒಂದು ವೇಳೆ ಆಶ್ಲೇಘ್ ಅವರು ಪ್ರಶಸ್ತಿ ಗೆದ್ರೆ, 44 ವರ್ಷಗಳ ಬಳಿಕ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.
Australian Open 2022- Unstoppable Ashleigh Barty rolls into final
ಈ ಹಿಂದೆ ಅಂದ್ರೆ 1078ರಲ್ಲಿ ಕ್ರಿಸ್ ಒ ನೆಲ್ ಅವರು ಮೊಟ್ಟ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದ ಆಸ್ಟ್ರೇಲಿಯಾದ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಇನ್ನು ಪುರಷರ ವಿಭಾಗದಲ್ಲಿ ಲಿಟನ್ ಹೆವಿಟ್ ಅವರು 2005ರಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರು.
ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಶ್ಲೇಘ್ ಬಾರ್ಟಿ ಅವರು ಏಳನೇ ಶ್ರೇಯಾಂಕಿತೆ ಐಗಾ ಸ್ವಿಟೆಕ್ ಅಥವಾ ಅಮೆರಿಕಾದ ಡೆನಿಯಲ್ ಕಾಲಿನ್ಸ್ ಅವರನ್ನು ಎದುರಿಸಲಿದ್ದಾರೆ.