Odisha Open badminton-ಕ್ವಾರ್ಟರ್ ಫೈನಲ್ ಗೆ ಎಂಟ್ರಿಯಾದ ಮಾಲ್ವಿಕಾ ಬನ್ಸೋದ್
ಒಡಿಸ್ಸಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಯುವ ಆಟಗಾರ್ತಿ ಮಾಲ್ವಿಕಾ ಬನ್ಸೋದ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಕಟಕ್ ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಾಲ್ವಿಕಾ ಬನ್ಸೋದ್ ಅವರು 21-13, 21-15ರಿಂದ 16ರ ಹರೆಯದ ಯುವ ಆಟಗಾರ್ತಿ ಹಾಗೂ ವಿಶ್ವ ಜೂನಿಯರ್ ನಂಬರ್ ವನ್ ಆಟಗಾರ್ತಿ ತಸ್ನಿಮ್ ಮಿರ್ ಅವರನ್ನು ಕೇವಲ 30 ನಿಮಿಷಗಳ ಹೋರಾಟದಲ್ಲಿ ಸೋಲಿಸಿದ್ರು.
20ರ ಹರೆಯದ ಮಾಲ್ವಿಕಾ ಬನ್ಸೋದ್ ಅವರು ಕಳೆದ ವಾರ ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ನಲ್ಲಿ ಪಿ.ವಿ. ಸಿಂಧೂ ವಿರುದ್ದ ಸೋಲು ಅನುಭವಿಸಿದ್ದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬನ್ಸೋದ್ ಅವರು ತನ್ಯಾ ಹೇಮಂತ್ ಅಥವಾ ವಿಜೇತ್ ಹರೀಶ್ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕಿತೆ ಆಶ್ಮಿತಾ ಚಾಲಿಹಾ ಅವರು 21-17, 21-16ರಿಂದ ಅನುಪಮಾ ಉಪಾಧ್ಯಯ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಿಕ್ಸೆಡ್ ಡಬಲ್ಸ್ ನಲ್ಲಿ ಭಾರತದ ಧೃವ ರಾವತ್ ಮತ್ತು ಶಿಖಾ ಗೌತಮ್ ಅವರು 11-21, 14-21ರಿಂದ ಶ್ರೀಲಂಕಾದ ಸಚಿನ್ ಡಯಾಸ್ ಮತ್ತು ತಿಲಿನಿ ಹೆಂಡಾಹೆವಾ ವಿರುದ್ಧ ಸೋಲು ಅನುಭವಿಸಿದ್ರು.