Australian Open 2022- ನಾಲ್ಕರ ಘಟ್ಟ ತಲುಪಿದ ಐಗಾ ಸ್ವಿಟೆಕ್
ಫ್ರೆಂಚ್ ಓಪನ್ ಮಾಜಿ ಚಾಂಪಿಯನ್ ಪೋಲೆಂಡ್ ನ ಐಗಾ ಸ್ವಿಟೆಕ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಮೆಲ್ಬರ್ನ್ ಪಾರ್ಕ್ ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐಗಾ ಸ್ವಿಟೆಕ್ ಅವರು 4-6, 7=6, 6-3ರಿಂದ ಕೈಯಾ ಕಾನೆಪಿ ಅವರನ್ನು ಪರಾಭವಗೊಳಿಸಿದ್ರು.
Australian Open- 2022 – Swiatek outlasts Kanepi to set up Collins semis
ಐಗಾ ಸ್ವಿಟೆಕ್ ಅವರು ಇದೇ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುತ್ತಿರುವುದು. ಸೆಮಿಫೈನಲ್ ಪಂದ್ಯದಲ್ಲಿ ಐಗಾ ಸ್ವಿಟೆಕ್ ಅವರು ಅಮೆರಿಕಾದ ಡೆನಿಯಲ್ ಕಾಲಿನ್ಸ್ ಅವರನ್ನು ಎದುರಿಸಲಿದ್ದಾರೆ.
ಡೇನಿಯಲ್ ಕಾಲಿನ್ಸ್ ಅವರು ಇದಕ್ಕು ಮೊದಲು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರೆಂಚ್ ನ ಆಲೀಝ್ ಕಾರ್ನೆಟ್ ಅವರನ್ನು ಸೋಲಿಸಿದ್ದರು.
ಈ ಪಂದ್ಯವನ್ನು ಗೆಲ್ಲಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ನನಗೆ ಸಂತಸವನ್ನುಂಟು ಮಾಡಿದೆ ಎಂದು ಐಗಾ ಸ್ವಿಟೆಕ್ ಅವರು ಹೇಳಿದ್ರು.
2020ರಲ್ಲಿ ಐಗಾ ಸ್ವಿಟೆಕ್ ಅವರು ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.