Australian Open 2022- ಸೆಮಿಫೈನಲ್ ಪ್ರವೇಶಿಸಿದ ಗ್ರೀಕ್ ನ ಸ್ಟೆಫಾನೊಸ್ ಸಿಟ್ಸಿಪಸ್
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಗ್ರೀಕ್ ನ ಸ್ಟಿಫಾನೊಸ್ ಸಿಟ್ಸಿಪಸ್ ಅವರು ಸೆಮಿಫೈನಲ್ ಗೆ ಎಂಟ್ರಿಯಾಗಿದ್ದಾರೆ.
ನಾಲ್ಕನೇ ಶ್ರೇಯಾಂಕಿತ ಸ್ಟಿಫಾನೊಸ್ ಅವರು 6-3, 6-4, 6-2 ನೇರ ಸೆಟ್ ಗಳಿಂದ ಜಾನಿಕ್ ಸಿನ್ನರ್ ಅವರನ್ನು ಪರಾಭವಗೊಳಿಸಿದ್ರು.
Australian Open 2022-Stefanos Tsitsipas celebrates winning his quarter-final match
2019 ಮತ್ತು 2021ರಲ್ಲಿ ಸ್ಟಿಫಾನೊಸ್ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಇದೀಗ ಮತ್ತೊಮ್ಮೆ ಸೆಮಿಫೈನಲ್ ಪ್ರವೇಶಿಸಿದ್ದಾರೆ. 23ರ ಹರೆಯದ ಸ್ಟೆಫಾನೊಸ್ ಅವರು ರಷ್ಯಾದ ಡೆನಿಲ್ ಮೆಡ್ವಡೇವ್ ಅಥವಾ ಕೆನಾಡ ಫೆಲಿಕ್ಸ್ ಆಗೆರ್ ಆಲಿಸಿಮ್ ಅವರನ್ನು ಎದುರಿಸಲಿದ್ದಾರೆ.
ಕಳೆದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸ್ಟೇಫಾನೊಸ್ ಅವರು ರನ್ನರ್ ಅಪ್ ಗೆ ಸಮಾಧಾನಪಟ್ಟುಕೊಂಡಿದ್ದರು. ಈ ಪಂದ್ಯದ ವೇಳೆ ಸ್ಟೇಫಾನೊಸ್ ಅವರು ಕೂಡ ಗಾಯಗೊಂಡಿದ್ದರು. ಇದೀದ ಚೇತರಿಸಿಕೊಂಡು ಮತ್ತೆ ಹಳೆಯ ಲಯವನ್ನು ಕಂಡುಕೊಂಡಿದ್ದಾರೆ. ನಾನು ನನ್ನ ವೈದ್ಯರ ಜೊತೆ ಸಂಪರ್ಕದಲ್ಲಿದ್ದೇನೆ. ನನ್ನ ಪ್ರತಿ ಹೆಜ್ಜೆಗಳನ್ನು ಅವರು ಅವಲೋಕಿಸುತ್ತಿದ್ದಾರೆ. ಅಲ್ಲದೆ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ನಿನಗೆ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದ್ರೆ ಅವರ ಮಾತನ್ನು ನಾನು ಹುಸಿಗೊಳಸಿದ್ದೇನೆ. ಈ ಬಗ್ಗೆ ನನಗೆ ಸಂತಸವಿದೆ. ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಗಟ್ಟಿಯಾಗಿದ್ದೇನೆ ಎಂದು ಪಂದ್ಯದ ಗೆಲುವಿನ ನಂತರ ಸ್ಟೆಫಾನೊಸ್ ಅವರು ಹೇಳಿದ್ದಾರೆ.