Australian Open 2022 – ಸೋಲಿನೊಂದಿಗೆ ಆಸ್ಟ್ರೇಲಿಯನ್ ಓಪನ್ ಟೂರ್ನಿಗೆ ವಿದಾಯ ಹೇಳಿದ ಸಾನಿಯಾ ಮಿರ್ಜಾ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕಾದ ರಾಜೀವ್ ರಾವ್ ಅವರ ಹೋರಾಟ ಅಂತ್ಯಗೊಂಡಿದೆ.
ಕ್ವಾರ್ಟರ್ ಫೈನಲ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ರಾಜೀವ್ ರಾಮ್ ಅವರು 4-6, 6-7ರಿಂದ ಆಸ್ಟ್ರೇಲಿಯಾದ ಜೈಮಿ ಫೊರ್ಲಿಸ್ ಮತ್ತು ಜೇಸನ್ ಕುಬ್ಲೇರ್ ವಿರುದ್ದ ಸೋಲು ಅನುಭವಿಸಿದ್ರು.
Australian Open 2022 Sania Mirza, playing in her last Australian Open
ಇದರೊಂದಿಗೆ ಸಾನಿಯಾ ಮಿರ್ಜಾ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಗೆ ವಿದಾಯ ಹೇಳಿದ್ರು. ಮಹಿಳೆಯರ ಡಬಲ್ಸ್ ನಲ್ಲಿ ಸೋತ ನಂತರ ಸಾನಿಯಾ ಮಿರ್ಜಾ ಅವರು ಈ ವರ್ಷದ ಅಂತ್ಯದ ವೇಳೆ ವೃತ್ತಿ ಪರ ಟೆನಿಸ್ ಬದುಕಿಗೆ ವಿದಾಯ ಹೇಳುವುದಾಗಿ ಹೇಳಿದ್ರು.
35ರ ಹರೆಯದ ಸಾನಿಯಾ ಮಿರ್ಜಾ ಅವರು ಭಾರತೀಯ ಟೆನಿಸ್ ರಂಗದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿದ್ದರು. ಅಲ್ಲದೆ ವಿಶ್ವ ಟೆನಿಸ್ ನಲ್ಲಿ ತನ್ನದೇ ಆದ ಛಾಪು ಕೂಡ ಮೂಡಿಸಿದ್ದರು.
ಅಂದ ಹಾಗೆ, ಸಾನಿಯಾ ಮಿರ್ಜಾ ಅವರು ಒಟ್ಟು ಆರು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಇದರಲ್ಲಿ ಮೂರು ಪ್ರಶಸ್ತಿಗಳು ಮಿಕ್ಸೆಡ್ ಡಬಲ್ಸ್ ನಲ್ಲಿ ಬಂದಿವೆ. 2009ರಲ್ಲಿ ಮಹೇಶ್ ಭೂಪತಿ ಜೊತೆ ಮಿಕ್ಸೆಡ್ ಡಬಲ್ಸ್ ನಲ್ಲಿ ಹಾಗೂ 2016ರಲ್ಲಿ ಮಾರ್ಟಿನಾ ಹಿಂಗೀಸ್ ಜೊತೆ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಅವರು ಆಸ್ಟ್ರೆಲಿಯನ್ ಓಪನ್ ಗೆದ್ದುಕೊಂಡಿದ್ದರು.