ಆಸ್ಟ್ರೇಲಿಯನ್ ಓಪನ್ 2022-ನಾಲ್ಕನೇ ಸುತ್ತಿಗೆ ಎಂಟ್ರಿಯಾದ ಸಿಮೊನಾ ಹಲೆಪ್
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಸಿಮೊನಾ ಹಲೆಪ್ ಅವರು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗಾಯದಿಂದಾಗಿ 2021ರ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದ ಸಿಮೊನಾ ಹಲೆಪ್ ಅವರು ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಅಲ್ಲದೆ ಫಿಟ್ ಆಂಡ್ ಫೈನ್ ಆಗಿರುವ ಸಿಮೊನಾ ಅವರು ಅದ್ಭುತವಾದ ಲಯದಲ್ಲೂ ಇದ್ದಾರೆ.
ಮೂರನೇ ಸುತ್ತಿನ ಪಂದ್ಯದಲ್ಲಿ ಸಿಮೊನಾ ಹಲೆಪ್ ಅವರು 6-2, 6-1ರಿಂದ ಡಂಕಾ ಕೊವೆನಿಕ್ ಅವರನ್ನು ಸುಲಭವಾಗಿ ಪರಾಭವಗೊಳಿಸಿದ್ರು.
ಎರಡು ಬಾರಿ ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಆಗಿರುವ ಸಿಮೊನಾ ಹಲೆಪ್ ಅವರು 2018ರ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.
ಮಹಿಳೆಯರ ಇನ್ನೊಂದು ಸಿಂಗಲ್ಸ್ ನಲ್ಲಿ ಡ್ಯಾಂಕಾ ಕೊವಿನಿಕ್ ಅವರು 6-4, 4-6, 6-3ರಿಂದ ಬ್ರಿಟನ್ ನ ಎಮ್ಮಾ ರಾಡ್ಯುಕಾನ್ ಅವರನ್ನು ಮಣಿಸಿದ್ರು.