ಆಸ್ಟ್ರೇಲಿಯನ್ ಓಪನ್ 2022- ಮೂರನೇ ಸುತ್ತು ಪ್ರವೇಶಿಸಿದ ರಫೆಲ್ ನಡಾಲ್
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ರಫೆಲ್ ನಡಾಲ್ ಅವರು ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರು, 6-2, 6-3, 6-4ರಿಂದ ಜರ್ಮನಿಯ ಯಾನಿಕ್ ಹಾನ್ಫ್ಮಾನ್ ಅವರನ್ನು ಪರಾಭವಗೊಳಿಸಿದ್ರು.
ರಫೆಲ್ ನಡಾಲ್ ಅವರು ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವುದನ್ನು ಎದುರು ನೋಡುತ್ತಿದ್ದಾರೆ. ಸದ್ಯ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿರುವ ನಡಾಲ್ ಗೆ ರೋಜರ್ ಫೆಡರರ್ ಮತ್ತು ಜಾಕೊವಿಕ್ ಅವರ ಅನುಪಸ್ಥಿತಿಯಲ್ಲಿ ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಅವಕಾಶವಿದೆ.
ಪುರುಷರ ಇನ್ನೊಂದು ಸಿಂಗಲ್ಸ್ ನಲ್ಲಿ ಒಲಿಂಪಿಕ್ ಚಾಂಪಿಯನ್ ಅಲೆಕ್ಸಾಂಡರ್ ಝಿವೆರ್ವ್ ಕೂಡ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಅಲೆಕ್ಸಾಂಡರ್ ಝಿವೆರ್ವ್ 6-4, 6-4, 6-0ಯಿಂದ ಆಸ್ಟ್ರೇಲಿಯಾದ ಜೋನ್ ಮಿಲ್ಮಾನ್ ಅವರನ್ನು ಸೋಲಿಸಿದ್ರು.
ಪುರುಷರ ಮತ್ತೊಂದು ಸಿಂಗಲ್ಸ್ ನಲ್ಲಿ ಕಾರ್ಲೊಸ್ ಅಕ್ಲಾರಾಝ್ 6-2, 6-1, 7-5ರಿಂದ ಡುಸಾನ್ ಲಾಜೊವಿಕ್ ಅವರನ್ನು ಸುಲಭವಾಗಿ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದ್ರು.