ಆಸ್ಟ್ರೇಲಿಯನ್ ಓಪನ್ 2022- ಮೂರನೇ ಸುತ್ತು ಪ್ರವೇಶಿಸಿದ ಹಾಲಿ ಚಾಂಪಿಯನ್ ನೌಮಿ ಒಸಾಕಾ
ಜಪಾನ್ ನ ನೌಮಿ ಒಸಾಕಾ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ನೌಮಿ ಒಸಾಕಾ ಅವರು 6-0, 6-4ರಿಂದ ಅಮೆರಿಕಾದ ಮ್ಯಾಡಿಸನ್ ಬ್ರೆಂಗ್ಲೆ ಅವರನ್ನು ಸುಲಭವಾಗಿ ಮಣಿಸಿದ್ರು. ಹಾಲಿ ಚಾಂಪಿಯನ್ ಆಗಿರುವ ನೌಮಿ ಅವರು ಮುಂದಿನ ಸುತ್ತಿನಲ್ಲಿ ಅಮೆರಿಕಾದ 20ರ ಹರೆಯದ ಅಮಾಂಡಾ ಆನಿಸಿಮೊವಾ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ರೆ, ನಾಲ್ಕನೇ ಸುತ್ತಿನ ಪಂದ್ಯದಲ್ಲಿ ನೌಮಿ ಒಸಾಕಾ ಅವರು ಅಗ್ರ ಶ್ರೇಯಾಂಕಿತೆ ಆಸ್ಟ್ರೇಲಿಯಾದ ಆಶ್ಲೇಘ್ ಬಾರ್ಟಿ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ ಇನ್ನೊಂದು ಪಂದ್ಯದಲ್ಲಿ ಅಮಾಂಡಾ ಆನಿಸಿಮೊವಾ 6-2, 7-5ರಿಂದ ಒಲಿಂಪಿಕ್ ಚಿನ್ನದ ಪದಕ ಗೆದ್ದ ಬೆಲಿಂಡಾ ಬೆನ್‍ಸಿಕ್ ಅವರನ್ನು ಪರಾಭವಗೊಳಿಸಿದ್ರು.